ADVERTISEMENT

ಗೀಜಾ ಪಿರಮಿಡ್ ಬಳಿ ಪ್ರವಾಸಿಗಳ ಬಸ್‍ನಲ್ಲಿ ಬಾಂಬ್ ಸ್ಫೋಟ: 4 ಸಾವು

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2018, 5:00 IST
Last Updated 29 ಡಿಸೆಂಬರ್ 2018, 5:00 IST
ಕೃಪೆ: ಟ್ವಿಟರ್
ಕೃಪೆ: ಟ್ವಿಟರ್   

ಕೈರೊ (ಈಜಿಪ್ಟ್): ಈಜಿಪ್ಟ್‌ನಗೀಜಾ ಪಿರಮಿಡ್ ಬಳಿ ಪ್ರವಾಸಿಗರ ಬಸ್‍ನಲ್ಲಿ ಬಾಂಬ್ ಸ್ಫೋಟಗೊಂಡು ನಾಲ್ಕು ಮಂದಿ ಸಾವಿಗೀಡಾಗಿದ್ದಾರೆ.

ಶುಕ್ರವಾರ ಈ ಘಟನೆ ನಡೆದಿದ್ದು, ಬಸ್‍ನಲ್ಲಿದ್ದ ಮೂವರು ವಿಯೆಟ್ನಾಂ ಪ್ರವಾಸಿಗಳು ಮತ್ತು ಈಜಿಪ್ಟ್ ದೇಶದ ಟೂರ್ ಗೈಡ್ ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪಬ್ಲಿಕ್ ಪ್ರಾಸಿಕ್ಯೂಟರ್ ಕಚೇರಿಯ ಪ್ರಕಟಣೆಯ ಪ್ರಕಾರ ವಿಯೆಟ್ನಾಂನ 11 ಮಂದಿ ಪ್ರವಾಸಿಗಳು ಮತ್ತು ಈಜಿಪ್ಟ್ ನ ಬಸ್ ಚಾಲಕ ಈ ಘಟನೆಯಲ್ಲಿ ಗಾಯಗೊಂಡಿದ್ದಾರೆ.

ADVERTISEMENT

ಗಾಜಾ ಪಿರಮಿಡ್‍ಗಳ ಬಳಿ ಅಲ್ ಹರಾಮ್ ಜಿಲ್ಲೆಯ ಮರಿಯುತಿಯಾ ರಸ್ತೆಯ ಗೋಡೆಯೊಂದರಲ್ಲಿ ಸ್ಫೋಟ ವಸ್ತು ಇರಿಸಿ ಈ ಕೃತ್ಯ ಎಸಗಲಾಗಿದೆ.
ಬಸ್ಸಿನಲ್ಲಿ 14 ವಿಯೆಟ್ನಾಂ ಮೂಲದ ಪ್ರವಾಸಿಗರು, ಈಜಿಪ್ಟ್ ಮೂಲದ ಓರ್ವ ಚಾಲಕ ಮತ್ತು ಟೂರ್ ಗೈಡ್ ಇದ್ದರು. ಸ್ಫೋಟ ಸಂಭವಿಸಿದ ತಕ್ಷಣವೇ ರಕ್ಷಣಾ ದಳದವರು ಆಗಮಿಸಿದ್ದು, ಸ್ಥಳದಲ್ಲಿ ತನಿಖೆ ನಡೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.