ADVERTISEMENT

ಶಾಂತಿ ಒಪ್ಪಂದ ರದ್ದು: ಇಸ್ರೇಲ್‌ಗೆ ಈಜಿಪ್ಟ್‌ ಬೆದರಿಕೆ

ಏಜೆನ್ಸೀಸ್
Published 11 ಫೆಬ್ರುವರಿ 2024, 15:24 IST
Last Updated 11 ಫೆಬ್ರುವರಿ 2024, 15:24 IST
<div class="paragraphs"><p>ಇಸ್ರೇಲ್‌ಗೆ</p></div>

ಇಸ್ರೇಲ್‌ಗೆ

   

ರಫಾ: ‘ಗಾಜಾ ಪಟ್ಟಿಯ ರಫಾ ನಗರಕ್ಕೆ ಸೇನೆಯನ್ನು ಕಳುಹಿಸಿದರೆ ನಿಮ್ಮೊಂದಿಗೆ ಮಾಡಿಕೊಂಡಿರುವ ಶಾಂತಿ ಒಪ್ಪಂದವನ್ನು ರದ್ದು ಮಾಡಬೇಕಾಗಬಹುದು’ ಎಂದು ಈಜಿಪ್ಟ್‌ ಭಾನುವಾರ ಇಸ್ರೇಲ್‌ಗೆ ಎಚ್ಚರಿಕೆ ನೀಡಿದೆ.

‘ರಫಾದಲ್ಲಿ ಗಲಭೆಯೇನಾದರೂ ಉಂಟಾದರೆ, ಈ ಪ್ರದೇಶದ ಪ್ರಮುಖ ನೆರವು ಪೂರೈಕೆ ಮಾರ್ಗವನ್ನು ಮುಚ್ಚಲಾಗುವುದು’ ಎಂದೂ ಈಜಿಪ್ಟ್‌ ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

‘ಪ್ಯಾಲೆಸ್ಟೀನ್‌ ಬಂಡುಕೋರರ ವಿರುದ್ಧ ಕಳೆದ ನಾಲ್ಕು ತಿಂಗಳಿನಿಂದ ನಡೆಯುತ್ತಿರುವ ಯುದ್ಧದಲ್ಲಿ ಗೆಲ್ಲಬೇಕಾದರೆ ರಫಾ ನಗರಕ್ಕೆ ಸೇನೆಯನ್ನು ಕಳುಹಿಸಬೇಕು’ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರು ಹೇಳಿಕೆ ನೀಡಿದ ಬೆನ್ನಲ್ಲೇ ಸುಮಾರು 50 ವರ್ಷದಿಂದ ಪ್ರಾದೇಶಿಕ ಸ್ಥಿರತೆಗೆ ಮೂಲ ಆಧಾರವಾಗಿರುವ ಕ್ಯಾಂಪ್‌ ಡೇವಿಡ್‌ ಅಕಾರ್ಡ್ಸ್ ಶಾಂತಿ ಒಪ್ಪಂದವನ್ನು ರದ್ದುಪಡಿಸುವ ಬೆದರಿಕೆಯನ್ನು ಈಜಿಪ್ಟ್ ಹಾಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.