ADVERTISEMENT

ರಷ್ಯಾ ವಿವಿಯೊಳಗೆ ಶೂಟೌಟ್: 8 ಸಾವು, ಪಾರಾಗಲು ಕಟ್ಟಡದಿಂದ ಹಾರಿದ ವಿದ್ಯಾರ್ಥಿಗಳು

ರಾಯಿಟರ್ಸ್
Published 20 ಸೆಪ್ಟೆಂಬರ್ 2021, 15:53 IST
Last Updated 20 ಸೆಪ್ಟೆಂಬರ್ 2021, 15:53 IST
ಗುಂಡಿನ ದಾಳಿ ಹಿನ್ನೆಲೆಯಲ್ಲಿ ಆತಂಕದಿಂದ ತರಗತಿಯಿಂದ ಹೊರ ಬಂದಿರುವ ವಿದ್ಯಾರ್ಥಿಗಳು (ಎಪಿ ಚಿತ್ರ)
ಗುಂಡಿನ ದಾಳಿ ಹಿನ್ನೆಲೆಯಲ್ಲಿ ಆತಂಕದಿಂದ ತರಗತಿಯಿಂದ ಹೊರ ಬಂದಿರುವ ವಿದ್ಯಾರ್ಥಿಗಳು (ಎಪಿ ಚಿತ್ರ)   

ಮಾಸ್ಕೋ: ರಷ್ಯಾದ ಪೆರ್ಮ್ ನಗರದ ವಿಶ್ವವಿದ್ಯಾಲಯದಲ್ಲಿ ಸೋಮವಾರ ವಿದ್ಯಾರ್ಥಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, ಕನಿಷ್ಠ ಎಂಟು ಜನರು ಸಾವಿಗೀಡಾಗಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ಕಾನೂನು ಜಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಮಾಸ್ಕೋ ನಗರದ ಪೂರ್ವಕ್ಕೆ 1,300 ಕಿಮೀ (800 ಮೈಲಿ) ದೂರದಲ್ಲಿರುವ ಪೆರ್ಮ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ಗುಂಡಿನ ದಾಳಿ ನಡೆದಿದೆ. ಬಳಿಕ ಬಂದೂಕುಧಾರಿಯನ್ನು ಬಂಧಿಸಲಾಗಿದೆ. ಬಂಧನದ ವೇಳೆ ಆತ ಪ್ರತಿರೋಧ ತೋರಿದ ಹಿನ್ನೆಲೆಯಲ್ಲಿ ಆತನಿಗೂ ಗಾಯಗಳಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ದಾಳಿಯಿಂದ ತಪ್ಪಿಸಿಕೊಳ್ಳಲು ವಿದ್ಯಾರ್ಥಿಗಳು ಮೊದಲ ಮಹಡಿಯ ಕಿಟಕಿಗಳಿಂದ ಜಿಗಿಯುವುದು, ಸುರಕ್ಷತೆಗೆ ಓಡುವ ದೃಶ್ಯ ಮಾಧ್ಯಮಗಳ ವಿಡಿಯೊ ತುಣುಕಿನಲ್ಲಿ ಕಂಡು ಬಂದಿದೆ

ADVERTISEMENT

ಬಂದೂಕುಧಾರಿ ತಮ್ಮ ತರಗತಿಗೆ ಪ್ರವೇಶಿಸುವುದನ್ನು ತಡೆಯಲು ವಿದ್ಯಾರ್ಥಿಗಳು ಕುರ್ಚಿಗಳನ್ನೇಬ್ಯಾರಿಕೇಡ್‌ಗಳನ್ನಾಗಿ ಮಾಡಿಕೊಂಡಿದ್ದರು ಎಂದು ತನಿಖಾ ತಂಡ ಹೇಳಿದೆ.

ಬಂದೂಕುಧಾರಿಯನ್ನು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ ಎಂದು ಪ್ರಮುಖ ಅಪರಾಧಗಳ ತನಿಖೆ ನಿರ್ವಹಿಸುವ ತನಿಖಾ ಸಮಿತಿ ಹೇಳಿದೆ

‘ತರಗತಿಯಲ್ಲಿ ಸುಮಾರು 60 ಜನರಿದ್ದರು. ನಾವು ಬಾಗಿಲು ಮುಚ್ಚಿ, ಅದಕ್ಕೆ ಕುರ್ಚಿಗಳಿಂದ ಬ್ಯಾರಿಕೇಡ್ ನಿರ್ಮಿಸಿ ಅವನ ಪ್ರವೇಶ ತಡೆದಿದ್ದೇವೆ’ ಎಂದು ವಿದ್ಯಾರ್ಥಿ ಸೆಮಿಯೋನ್ ಕಾರ್ಯಕಿನ್ ರಾಯಿಟರ್ಸ್‌ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.