ADVERTISEMENT

ಕೊಲಂಬೊ: ನಿಲ್ಲದ ಬಾಂಬ್ ದಾಳಿ, 8ನೇ ಬಾಂಬ್‍ ಸ್ಫೋಟದಲ್ಲಿ 3 ಸಾವು 

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2019, 11:30 IST
Last Updated 21 ಏಪ್ರಿಲ್ 2019, 11:30 IST
   

ಕೊಲಂಬೊ: ಶ್ರೀಲಂಕಾದಲ್ಲಿ ಬಾಂಬ್ ದಾಳಿ ಇನ್ನೂ ನಿಂತಿಲ್ಲ. ಮಧ್ಯಾಹ್ನ ನಂತರ ಕೊಲಂಬೊದಲ್ಲಿ ಎರಡು ಕಡೆ ಬಾಂಬ್ ಸ್ಫೋಟ ಸಂಭವಿಸಿದೆ.

ಕೊಲಂಬೊದ ದೆಹಿವಲ ಎಂಬಲ್ಲಿ ಏಳನೇ ಬಾಂಬ್ ಸ್ಫೋಟ ಸಂಭವಿಸಿದ್ದು ಇದರಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ.ಇಲ್ಲಿನ ಡೆಮಟಾಗೊಡ ಮಹವಿಲಾ ಗಾರ್ಡನ್‌ನಲ್ಲಿ ಸಂಭವಿಸಿದ ಎಂಟನೇ ಬಾಂಬ್ ಸ್ಫೋಟದಲ್ಲಿ ಮೂವರುಸಾವಿಗೀಡಾಗಿದ್ದಾರೆ.ಇದು ಆತ್ಮಾಹುತಿ ದಾಳಿ ಎಂದು ಎಎಫ್‍ಪಿ ವರದಿ ಮಾಡಿದೆ.

ಭಾನುವಾರ ಬೆಳಗ್ಗೆ ಕೊಲೊಂಬೊದಲ್ಲಿ 6 ಸರಣಿ ಬಾಂಬ್ ಸ್ಫೋಟ ಸಂಭವಿಸಿದ್ದು ಇಲ್ಲಿಯವರೆಗೆ160 ಮಂದಿ ಸಾವಿಗೀಡಾಗಿದ್ದಾರೆ,.ದರಲ್ಲಿ 35 ಹೊರರಾಷ್ಟ್ರದವರಾಗಿದ್ದು, 500 ಮಂದಿಗೆ ಗಾಯಗಳಾಗಿವೆ.

ADVERTISEMENT

ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ವರದಿ ಮಾಡಿದೆ. ಈ ಸರಣಿ ಬಾಂಬ್ ಸ್ಫೋಟದ ಹೊಣೆಯನ್ನು ಇಲ್ಲಿಯವರೆಗೆ ಯಾವುದೇ ಸಂಘಟನೆಗಳು ವಹಿಸಿಲ್ಲ.

12 ಗಂಟೆಗಳ ಕರ್ಫ್ಯೂ
ಸರಣಿ ಬಾಂಬ್ ಸ್ಫೋಟ ಹಿನ್ನೆಲೆಯಲ್ಲಿ ಶ್ರೀಲಂಕಾದಲ್ಲಿ ಭಾನುವಾರ ಸಂಜೆ 6 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆವರೆಗೆ ಕರ್ಫ್ಯೂ ಹೇರಲಾಗಿದೆ. ವಾಟ್ಸ್ಆ್ಯಪ್, ಫೇಸ್‌ಬುಕ್ ಮತ್ತು ವೈಬರ್ ಮೊದಲಾದ ಸಾಮಾಜಿಕ ಜಾಲತಾಣಗಳಿಗೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ.

ಇದನ್ನೂ ಓದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.