ADVERTISEMENT

ಸಾಪೇಕ್ಷ ಸಿದ್ಧಾಂತದ ಹಸ್ತಪ್ರತಿ ನೊಬೆಲ್ ಸಂಗ್ರಹಾಲಯಕ್ಕೆ

₹ 86 ಲಕ್ಷಕ್ಕೆ ಹಸ್ತಪ್ರತಿ ಖರೀದಿಸಿದ್ದ ಪರ್‌ ಟಾಬ್‌

ಏಜೆನ್ಸೀಸ್
Published 20 ಜೂನ್ 2019, 19:45 IST
Last Updated 20 ಜೂನ್ 2019, 19:45 IST
ಐನ್‌ಸ್ಟೀನ್‌
ಐನ್‌ಸ್ಟೀನ್‌   

ಸ್ಟಾಕ್‌ಹೋಂ: ಆಲ್ಬರ್ಟ್‌ ಐನ್‌ಸ್ಟೀನ್ ಮಂಡಿಸಿದ ಸಾಪೇಕ್ಷ ಸಿದ್ಧಾಂತದ ಎರಡು ಪುಟಗಳ ಹಸ್ತಪ್ರತಿಯನ್ನು ಸ್ವೀಡಿಷ್ ಉದ್ಯಮಿ ಪರ್‌ ಟಾಬ್ ಅವರು ನೊಬೆಲ್ ಸಂಗ್ರಹಾಲಯಕ್ಕೆ ಉಡುಗೊರೆಯಾಗಿ ನೀಡಿದ್ದಾರೆ.

ಕಳೆದ ವರ್ಷ ನಡೆದ ಹರಾಜಿನಲ್ಲಿ ₹86 ಲಕ್ಷ ನೀಡಿ ಟಾಬ್ ಅವರು ಈ ಹಸ್ತಪ್ರತಿ ಖರೀದಿಸಿದ್ದರು. ಇದನ್ನು ನೊಬೆಲ್ ಸಂಗ್ರಹಾಲಯಕ್ಕೆ ನೀಡುವುದಾಗಿ ಆಗ ಅವರು ಘೋಷಿಸಿದ್ದರು.

ನೊಬೆಲ್‌ ಪುರಸ್ಕೃತ ಜರ್ಮನ್‌ನ ಭೌತವಿಜ್ಞಾನಿ ಮ್ಯಾಕ್ಸ್ ವಾನ್ ಲಾವಿ ಅವರು ಸಾಪೇಕ್ಷ ಸಿದ್ಧಾಂತಕ್ಕೆ ಬರೆದಿದ್ದ ಕೈಬರಹದ ಟಿಪ್ಪಣಿ ಸಹ ಇದೇ ಹಸ್ತಪ್ರತಿಯಲ್ಲಿದೆ. 1948ರವರೆಗೂ ಲಾವಿ ಅವರೇ ಈ ಹಸ್ತಪ್ರತಿ ಹೊಂದಿದ್ದರು. ಬಳಿಕ ಅದು ಖಾಸಗಿ ಸಂಗ್ರಹಕಾರರಿಗೆ ಹಸ್ತಾಂತರವಾಗಿತ್ತು.

ADVERTISEMENT

ದ್ಯುತಿವಿದ್ಯುತ್ ನಿಯಮ ಕುರಿತು ಮಂಡಿಸಿದ ಸಿದ್ಧಾಂತಕ್ಕಾಗಿ ಐನ್‌ಸ್ಟೀನ್ ಅವರು 1922ರ ನವೆಂಬರ್ 10ರಂದು ನೊಬೆಲ್ ಪ್ರಶಸ್ತಿ ಸ್ವೀಕರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.