ವಾಷಿಂಗ್ಟನ್: ದೈತ್ಯ ಸಾಮಾಜಿಕ ಜಾಲತಾಣಗಳಾದ ಪೇಸ್ಬುಕ್ ಮತ್ತು ಟ್ವಿಟರ್ ಮಾಲೀಕರ ನಡುವೆ ವಾಕ್ಸಮರ ಮುಂದುವರಿದಿದೆ. ಆಗಾಗ ಮಾತಿನ ಸಮರದಲ್ಲಿ ತೊಡಗುವ ಎಲಾನ್ ಮಸ್ಕ್ ಮತ್ತು ಮಾರ್ಕ್ ಜುಕರ್‌ಬರ್ಗ್ ಥ್ರೆಡ್ಸ್ ಆರಂಭವಾದಾಗಿನಿಂದ ಮಾತಿನ ಯುದ್ಧವನ್ನೇ ಆರಂಭಿಸಿದ್ದಾರೆ.
ಕಳೆದ ವಾರ ಟ್ವಿಟರ್‌ಗೆ ಸೆಡ್ಡು ಹೊಡೆಯಲು ಥ್ರೆಡ್ಸ್ ಎಂಬ ಹೊಸ ಅಪ್ಲಿಕೇಷನ್ ಅನ್ನು ಜುಕರ್‌ಬರ್ಗ್ ಹೊರತಂದ ಬಳಿಕ ಆನ್‌ಲೈನ್‌ನಲ್ಲಿ ಇಬ್ಬರ ನಡುವಿನ ಮಾತು ವೈಯಕ್ತಿಕಕ್ಕೆ ತಿರುಗಿದೆ. ಇತ್ತೀಚಿಗೆ ಎಲಾನ್ ಮಸ್ಕ್ ಅವರು ತಮ್ಮ ಟ್ವೀಟ್‌ನಲ್ಲಿ ಜುಕರ್‌ಬರ್ಗ್ ಅವರನ್ನು 'ಜುಕ್ ಈಸ್ ಕುಕ್' ಎಂದು ಬರೆದುಕೊಂಡಿದ್ದಾರೆ. ಕುಕ್ ಎಂದರೆ ದುರ್ಬಲ ವ್ಯಕ್ತಿಯನ್ನು ಅವಮಾನಿಸುವ ಪದವಾಗಿದೆ.
ಥ್ರೆಡ್ಸ್ ಬಗ್ಗೆ ಟ್ವೀಟ್ ಮಾಡಿದ ಮಸ್ಕ್, ಮೆಟಾ ಸಂಸ್ಥಾಪಕ ಮತ್ತು ಸಿಇಒ ಬ್ರಾಂಡ್ ಸ್ಪೀಚ್‌ನ್ನು ರಕ್ಷಿಸುತ್ತಿದ್ದಾರೆ ಎಂದ ಅವರು, ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ ಮುಖ್ಯಸ್ಥ ಉದ್ದೇಶಪೂರ್ವಕವಾಗಿ ‘ವಾಕ್ ಸ್ವಾತಂತ್ರ್ಯವನ್ನು ರಕ್ಷಿಸುತ್ತಾರೆ‘ ಎಂದು ಟೀಕಿಸಿದ್ದಾರೆ.
ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್, ಥ್ರೆಡ್ಸ್ ಪ್ರಾರಂಭವಾದ ಐದು ದಿನಗಳಲ್ಲಿ 10 ಕೋಟಿ ಸೈನ್-ಅಪ್‌ಗಳನ್ನು ದಾಟಿದೆ. ಮೈಲಿಗಲ್ಲನ್ನು ಮುಟ್ಟುವ ವೇಗದ ಆನ್‌ಲೈನ್ ಪ್ಲಾಟ್‌ಫಾರ್ಮ್ ಆಗಿ ಚಾಟ್ ಜಿಪಿಟಿಯನ್ನು ಹಿಂದಿಕ್ಕಿದೆ ಎಂದು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.