ADVERTISEMENT

US ಸಂವಿಧಾನ ಬೆಂಬಲಿಸುವವರಿಗೆ ಪ್ರತಿ ದಿನ ₹10 ಲಕ್ಷ ನೀಡುತ್ತೇನೆ: ಇಲಾನ್‌ ಮಸ್ಕ್

ರಾಯಿಟರ್ಸ್
Published 20 ಅಕ್ಟೋಬರ್ 2024, 5:43 IST
Last Updated 20 ಅಕ್ಟೋಬರ್ 2024, 5:43 IST
<div class="paragraphs"><p>ಡೊನಾಲ್ಡ್‌ ಟ್ರಂಪ್ ಮತ್ತು ಇಲಾನ್‌ ಮಸ್ಕ್</p></div>

ಡೊನಾಲ್ಡ್‌ ಟ್ರಂಪ್ ಮತ್ತು ಇಲಾನ್‌ ಮಸ್ಕ್

   

–ರಾಯಿಟರ್ಸ್ ಚಿತ್ರ

ಪೆನ್ಸಿಲ್ವೇನಿಯಾ: ಬಿಲಿಯನೇರ್ ಉದ್ಯಮಿ ಇಲಾನ್‌ ಮಸ್ಕ್ ಅವರು ಅಮೆರಿಕದ ಸಂವಿಧಾನವನ್ನು ಬೆಂಬಲಿಸುವ ಆನ್‌ಲೈನ್ ಅರ್ಜಿಗೆ ಸಹಿ ಹಾಕುವವರಿಗೆ ನವೆಂಬರ್ 5ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯವರೆಗೆ ಪ್ರತಿದಿನ ₹10 ಲಕ್ಷ ನೀಡುವುದಾಗಿ ಭರವಸೆ ನೀಡಿದ್ದಾರೆ.

ADVERTISEMENT

ಈ ಬಾರಿಯ ಅಧ್ಯಕ್ಷೀಯ ಚುನಾವಣೆಯಲ್ಲಿ ಇಲಾನ್‌ ಮಸ್ಕ್ ಅವರು ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್ ಅವರನ್ನು ಬೆಂಬಲಿಸಿದ್ದು, ಪ್ರಚಾರ ಸಭೆಗಳಲ್ಲಿ ಭಾಗಿಯಾಗುತ್ತಿದ್ದಾರೆ. ಜತೆಗೆ, ಪೆನ್ಸಿಲ್ವೇನಿಯಾದಲ್ಲಿ ನಡೆಯಲಿರುವ ಟ್ರಂಪ್ ಸಭೆಯಲ್ಲಿ ಭಾಗವಹಿಸುವವರಿಗೆ ತಲಾ ₹10 ಲಕ್ಷ ಮೊತ್ತದ ಚೆಕ್‌ ಅನ್ನು ವಿತರಿಸಿದ್ದಾರೆ ಎಂದು ವರದಿಯಾಗಿದೆ.

ಮಸ್ಕ್ ಅವರು ಟ್ರಂಪ್ ಅವರನ್ನು ಬೆಂಬಲಿಸಲು ನೆರವಾಗಲು ಸಂಸ್ಥೆಯೊಂದನ್ನು ಪ್ರಾರಂಭಿಸಿದ್ದಾರೆ. ಈ ಸಂಸ್ಥೆಗೆ ಟ್ರಂಪ್‌ ಅವರ ಚುನಾವಣಾ ಪ್ರಚಾರ ಸಭೆಗಳ ಆಯೋಜನೆ, ಬೆಂಬಲಿಗರಿಗೆ ನೆರವು ಸೇರಿದಂತೆ ಚುನಾವಣೆಗೆ ಮತದಾರರನ್ನು ಸಜ್ಜುಗೊಳಿಸಲು ಮತ್ತು ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸುವ ಜವಾಬ್ದಾರಿ ವಹಿಸಲಾಗಿದೆ.

ಮಸ್ಕ್ ತಮ್ಮ ಸಂಸ್ಥೆಯ ಮೂಲಕ ಟ್ರಂಪ್ ಬೆಂಬಲಿಗರನ್ನು ಮತ ಚಲಾಯಿಸಲು ಮತ್ತು ಇತರರನ್ನು ಮತ ಚಲಾಯಿಸುಂತೆ ಪ್ರೋತ್ಸಾಹಿಸಲು ಹಲವು ಯೋಜನೆಗಳನ್ನು ರೂಪಿಸಿದ್ದಾರೆ ಎನ್ನಲಾಗಿದೆ.

ಮಸ್ಕ್ ಜನರನ್ನು ಸಹಿ ಮಾಡಲು ಸೂಚಿಸಿರುವ ಅರ್ಜಿಯಲ್ಲಿ ಮೊದಲ ಮತ್ತು ಎರಡನೆಯ ತಿದ್ದುಪಡಿಯು ವಾಕ್ ಸ್ವಾತಂತ್ರ್ಯ ಮತ್ತು ಶಸ್ತ್ರಾಸ್ತ್ರಗಳನ್ನು ಹೊಂದುವ ಹಕ್ಕನ್ನು ಖಾತರಿಪಡಿಸುತ್ತದೆ. ಅರ್ಜಿಗೆ ಸಹಿ ಮಾಡುವ ಮೂಲಕ ನಾನು ಮೊದಲೆರಡು ತಿದ್ದುಪಡಿಗಳಿಗೆ ನನ್ನ ಬೆಂಬಲವಿದೆ ಎಂದು ಪ್ರತಿಜ್ಞೆ ಮಾಡುತ್ತಿದ್ದೇನೆ ಎಂದು ಉಲ್ಲೇಖಿಸಲಾಗಿದೆ.

‘ಅಧ್ಯಕ್ಷೀಯ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್ ಗೆದ್ದರೆ ಇದು ಕೊನೆಯ ಚುನಾವಣೆಯಾಗಲಿದ್ದು, ಅಮೆರಿಕ ಇನ್ನು ಮುಂದೆ ಅಸ್ತಿತ್ವದಲ್ಲಿರುವುದಿಲ್ಲ. ಹಾಗೆಯೇ ಅಮೆರಿಕದ ಸ್ಥಿತಿಯನ್ನು ಬದಲಾಯಿಸಲು ಬಯಸಿರುವ ಟ್ರಂಪ್ ವಿರುದ್ಧ ಎರಡು ಬಾರಿ ಹತ್ಯೆ ಯತ್ನ ಪ್ರಯತ್ನ ನಡೆಸಲಾಗಿತ್ತು. ಆದರೆ, ಕಮಲಾ ಹ್ಯಾರಿಸ್ ಮೇಲೆ ಈ ರೀತಿ ಯತ್ನ ನಡೆದಿಲ್ಲ’ ಎಂದು ಮಸ್ಕ್ ಹೇಳಿದ್ದಾರೆ.

ಇತ್ತ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಂತೆಯೇ ಡೊನಾಲ್ಡ್‌ ಟ್ರಂಪ್‌ ಮತ್ತು ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ನಡುವೆ ವಾಕ್ಸಮರವೂ ಜೋರಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.