ADVERTISEMENT

ವಿಮಾನ ಪ್ರಯಾಣಿಕರಿಗೆ ಕಾಡಿದ ಅನಾರೋಗ್ಯ

ಏಜೆನ್ಸೀಸ್
Published 6 ಸೆಪ್ಟೆಂಬರ್ 2018, 10:28 IST
Last Updated 6 ಸೆಪ್ಟೆಂಬರ್ 2018, 10:28 IST
   

ನ್ಯೂಯಾರ್ಕ್‌ (ನ್ಯೂಯಾರ್ಕ್‌ ಟೈಮ್ಸ್‌): ಎಮಿರೇಟ್ಸ್‌ ಏರ್‌ಲೈನ್‌ ವಿಮಾನ 203ರಲ್ಲಿ ಪ್ರಯಾಣಿಸುತ್ತಿದ್ದವರ ಪೈಕಿ 100 ಮಂದಿಗೆ ಇದ್ದಕ್ಕಿದ್ದಂತೆ ಅನಾರೋಗ್ಯ ಕಾಣಿಸಿಕೊಂಡಿದೆ.

ದುಬೈನಿಂದ ಹೊರಟಿದ್ದ ವಿಮಾನ, ಬುಧವಾರ ನ್ಯಾಯಾರ್ಕ್‌ನಲ್ಲಿ ಇಳಿದಿದೆ. 521 ಪ್ರಯಾಣಿಕರಿದ್ದ ಈ ವಿಮಾನದಲ್ಲಿ 100ಕ್ಕೂ ಹೆಚ್ಚು ಮಂದಿಗೆ ಕೆಮ್ಮು, ತಲೆನೋವು ಮತ್ತು ಜ್ವರ ಕಾಣಿಸಿಕೊಂಡಿದೆ. ಏಕಕಾಲಕ್ಕೆ ಇವರೆಲ್ಲರೂ ಕೆಮ್ಮಲು ಆರಂಭಿಸಿದ್ದರಿಂದ ಸಹ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಯಾಗಿತ್ತು.

‘ಪ್ರಯಾಣ ಆರಂಭಿಸಿದ ನಂತರ ಅನಾರೋಗ್ಯ ಕಾಣಿಸಿಕೊಂಡಿಲ್ಲ. ಮೊದಲೇ ಈ ಪ್ರಯಾಣಿಕರ ಆರೋಗ್ಯ ಸರಿ ಇರಲಿಲ್ಲ’ ಎಂದು ಸಹ ಪ್ರಯಾಣಿಕ ನ್ಯೂಯಾರ್ಕ್‌ನ ಎರಿನ್‌ ಸೈಕ್ಸ್‌ ಹೇಳಿದ್ದಾರೆ.

ADVERTISEMENT

ವಿಮಾನ ಇಳಿಯುತ್ತಿದ್ದಂತೆ, ಪೈಲಟ್‌ ಈ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

‘ಪ್ರಯಾಣಿಕರು ಅನಾರೋಗ್ಯ ಪೀಡಿತರಾಗಲು ವೈರಸ್‌ ಕಾರಣ ಇರಬಹುದು’ ಎಂದು ಸಹಪ್ರಯಾಣಿಕ ಮುಸಾಬ್‌ ಮೊಹಮ್ಮದ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.