ADVERTISEMENT

ಪರಿಸರದ ಬಿಕ್ಕಟ್ಟುಗಳು ಮಾನವ ಹಕ್ಕುಗಳಿಗಿರುವ ಅತಿದೊಡ್ಡ ಸವಾಲು: ವಿಶ್ವಸಂಸ್ಥೆ

ರಾಯಿಟರ್ಸ್
Published 13 ಸೆಪ್ಟೆಂಬರ್ 2021, 10:54 IST
Last Updated 13 ಸೆಪ್ಟೆಂಬರ್ 2021, 10:54 IST
ಟ್ವಿಟರ್‌ ಚಿತ್ರ
ಟ್ವಿಟರ್‌ ಚಿತ್ರ   

ಜಿನಿವಾ: ಹವಾಮಾನ ಬದಲಾವಣೆ, ಜನಸಂಖ್ಯೆ ಮತ್ತು ಪ್ರಾಕೃತಿಕ ವಿನಾಶದಂತಹ ʼತ್ರಿವಳಿ ಜಾಗತಿಕ ಬಿಕ್ಕಟ್ಟುʼಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನವ ಹಕ್ಕುಗಳಿಗಿರುವ ಏಕೈಕ ದೊಡ್ಡ ಸವಾಲು ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದ ಮುಖ್ಯಸ್ಥೆ ಮಿಚೇಲ್‌ ಬ್ಯಾಚೆಲೆಟ್‌ ಹೇಳಿದ್ದಾರೆ.

ಜರ್ಮನಿಯಲ್ಲಿ ಉಂಟಾದ ಪ್ರವಾಹ ಮತ್ತು ಕ್ಯಾಲಿಫೋರ್ನಿಯಾದ ಕಾಳ್ಗಿಚ್ಚನ್ನು ಉಲ್ಲೇಖಿಸಿಮಾನವ ಹಕ್ಕುಗಳ ಮಂಡಳಿ ಸಭೆಯಲ್ಲಿ ಮಾತನಾಡಿದ ಬ್ಯಾಚೆಲೆಟ್‌, ʼಪರಿಸರದ ಆಪತ್ತುಗಳು ತೀವ್ರಗೊಂಡಂತೆ, ನಮ್ಮ ಕಾಲಘಟ್ಟದ ಮಾನವ ಹಕ್ಕುಗಳಿಗೆಬೃಹತ್ ಸಮಸ್ಯೆಯಾಗಿ ಪರಿಣಮಿಸುತ್ತವೆʼ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ʼನಾವುಕಟ್ಟುಪಾಡುಗಳನ್ನು ವಿಧಿಸಿಕೊಳ್ಳಬೇಕು. ವಾಸ್ತವದಲ್ಲಿ ನಮ್ಮ ಭವಿಷ್ಯವು ಅದನ್ನೇ ಅವಲಂಭಿಸಿದೆʼ ಎಂದೂ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.