ADVERTISEMENT

ಬ್ರೆಕ್ಸಿಟ್‌: ಬ್ರಿಟನ್‌ ಜೊತೆ ವ್ಯಾಪಾರ ಒಪ್ಪಂದಕ್ಕೆ ಐರೋಪ್ಯ ಒಕ್ಕೂಟ ಅನುಮೋದನೆ

ಏಜೆನ್ಸೀಸ್
Published 28 ಏಪ್ರಿಲ್ 2021, 10:44 IST
Last Updated 28 ಏಪ್ರಿಲ್ 2021, 10:44 IST
ಬ್ರಿಟನ್‌ ಹಾಗೂ ಐರೋಪ್ಯ ಒಕ್ಕೂಟದ ಬಾವುಟಗಳು (ಪ್ರಾತಿನಿಧಿಕ ಚಿತ್ರ) –ಎಎಫ್‌ಪಿ ಚಿತ್ರ
ಬ್ರಿಟನ್‌ ಹಾಗೂ ಐರೋಪ್ಯ ಒಕ್ಕೂಟದ ಬಾವುಟಗಳು (ಪ್ರಾತಿನಿಧಿಕ ಚಿತ್ರ) –ಎಎಫ್‌ಪಿ ಚಿತ್ರ   

ಬ್ರಸೆಲ್ಸ್‌: ಐರೋಪ್ಯ ಒಕ್ಕೂಟದಿಂದ ಹೊರ ಬಂದಿರುವ (ಬ್ರೆಕ್ಸಿಟ್‌) ಬ್ರಿಟನ್‌ನೊಂದಿಗೆ ವ್ಯಾಪಾರ ನಡೆಸುವ ಕುರಿತ ಒಪ್ಪಂದಕ್ಕೆ ಒಕ್ಕೂಟವು ಅನುಮೋದನೆ ನೀಡಿದೆ.

ಈ ಒಪ್ಪಂದವನ್ನು ಕಳೆದ ಕ್ರಿಸ್‌ಮಸ್‌ ವೇಳೆಯೇ ಅಂತಿಮಗೊಳಿಸಲಾಗಿತ್ತು. ಬ್ರಿಟನ್‌ನ ಸಂಸತ್‌ನ ಅನುಮೋದನೆ ದೊರೆತ ನಂತರ, ಕೆಲವು ನಿಬಂಧನೆಗಳಿಗೆ ಒಳಪಟ್ಟು ಈ ಒಪ್ಪಂದವನ್ನು ಜಾರಿಗೊಳಿಸಲಾಗಿತ್ತು.

ಈಗ ಐರೋಪ್ಯ ಒಕ್ಖೂಟದ ಅನುಮೋದನೆಯೂ ದೊರಕಿರುವುದರಿಂದ, ಒಪ್ಪಂದ ಜಾರಿಗೆ ಅಡ್ಡಿಯಾಗಿದ್ದ ಎಲ್ಲ ಕಾನೂನು ತೊಡಕುಗಳು ನಿವಾರಣೆಯಾದಂತಾಗಿವೆ.

ADVERTISEMENT

ಇಲ್ಲಿರುವ ಯುರೋಪಿಯನ್‌ ಸಂಸತ್‌ನಲ್ಲಿ ಈ ಒಪ್ಪಂದದ ಪರವಾಗಿ 600 ಸಂಸದರು, ವಿರುದ್ಧವಾಗಿ 5 ಸಂಸದರು ಮತ ಚಲಾಯಿಸಿದರು. 32 ಜನ ಸಂಸದರು ಮತದಾನ ಪ್ರಕ್ರಿಯೆಯಿಂದ ದೂರ ಉಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.