ADVERTISEMENT

ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್‌ಗೆ ನೆರವು ಹೆಚ್ಚಿಸಲು ಐರೋಪ್ಯ ಒಕ್ಕೂಟ ನಿರ್ಧಾರ

ಏಜೆನ್ಸೀಸ್
Published 23 ಮಾರ್ಚ್ 2023, 13:47 IST
Last Updated 23 ಮಾರ್ಚ್ 2023, 13:47 IST
-
-   

ಬ್ರುಸೆಲ್ಸ್‌: ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್‌ಗೆ ಮುಂದಿನ ಒಂದು ವರ್ಷದ ಒಳಗೆ 10 ಲಕ್ಷ ಫಿರಂಗಿ ಗುಂಡುಗಳ ಪೂರೈಕೆ ಸೇರಿದಂತೆ ಮಿಲಿಟರಿ ನೆರವನ್ನು ಹೆಚ್ಚಿಸಲು ಐರೋಪ್ಯ ಒಕ್ಕೂಟದ ನಾಯಕರು ನಿರ್ಧರಿಸಿದ್ದಾರೆ.

‘ಐರೋಪ್ಯ ದೇಶಗಳೆಲ್ಲವೂ ಸೇರಿ ತಮ್ಮ ಬಳಿ ಇರುವ ಶಸ್ತ್ರಾಸ್ತ್ರಗಳನ್ನು ಆದಷ್ಟು ಬೇಗ ಉಕ್ರೇನ್‌ಗೆ ನೀಡುವ ಯೋಜನೆ ರೂಪಿಸಲು ಒಕ್ಕೂಟದ ವಿದೇಶಾಂಗ ಹಾಗೂ ರಕ್ಷಣಾ ಸಚಿವರು ವಾರದ ಆರಂಭದಲ್ಲಿ ಸಭೆ ಸೇರಿ ನಿರ್ಧರಿಸಿದ್ದರು. ಒಕ್ಕೂಟದ ನಾಯಕರು ಗುರುವಾರ ಇಲ್ಲಿ ಸಭೆ ಸೇರಿ ಈ ಯೋಜನೆಗೆ ಒಪ್ಪಿಗೆ ನೀಡಿದ್ದಾರೆ’ ಎಂದು ಒಕ್ಕೂಟದ ವಕ್ತಾರರು ಮಾಹಿತಿ ನೀಡಿದರು.

27 ದೇಶಗಳ ಪೈಕಿ ಹಂಗೆರಿಯು ಉಕ್ರೇನ್‌ಗೆ ಶಸ್ತ್ರಾಸ್ತ್ರ ನೀಡಲು ನಿರಾಕರಿಸಿದೆ. ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್‌ ಬಳಿ ಸಾಕಷ್ಟು ಶಸ್ತ್ರಾಸ್ತ್ರ ಬಾಕಿ ಉಳಿದಿಲ್ಲ. ಆದ್ದರಿಂದ ಐರೋಪ್ಯ ಒಕ್ಕೂಟ ಈ ಯೋಜನೆಯನ್ನು ರೂಪಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.