ಢಾಕಾ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಬ್ಯಾಂಕ್ ಖಾತೆಗಳನ್ನು ತೆರಿಗೆ ಇಲಾಖೆ ಅಧಿಕಾರಿಗಳು 17 ವರ್ಷಗಳ ಬಳಿಕ ಸಕ್ರಿಯಗೊಳಿಸಿದ್ದಾರೆ.
ರಾಷ್ಟ್ರೀಯ ಆದಾಯ ಮಂಡಳಿಯು (ಎನ್‌ಬಿಆರ್) ಈ ಬಗ್ಗೆ ಬ್ಯಾಂಕ್‌ನ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದೆ ಎಂದು ‘ಡೈಲಿ ಸ್ಟಾರ್’ ದೈನಿಕವು ವರದಿ ಮಾಡಿದೆ.
ಮಾಜಿ ಪ್ರಧಾನಿಯೂ ಆದ ಖಲೀದಾ ಜಿಯಾ ಅವರ ಬ್ಯಾಂಕ್ ಖಾತೆ ಸ್ಥಗಿತಗೊಳಿಸಲು ಎನ್‌ಬಿಆರ್‌ನ ಕೇಂದ್ರ ಕಣ್ಗಾವಲು ಘಟಕ 2007ರ ಆಗಸ್ಟ್‌ನಲ್ಲಿ ಬ್ಯಾಂಕ್‌ಗಳಿಗೆ ಸೂಚಿಸಿತ್ತು.
ಈಗ ಅಸ್ತಿತ್ವದಲ್ಲಿರುವ ಸೇನೆ ಬೆಂಬಲಿತ ಉಸ್ತುವಾರಿ ಸರ್ಕಾರದ ಶಿಫಾರಸಿನಂತೆ, ಖಾತೆಗಳನ್ನು ಸಕ್ರಿಯಗೊಳಿಲಾಗಿದೆ ಎಂದು ಎನ್‌ಬಿಆರ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.