ADVERTISEMENT

ಪಾಕಿಸ್ತಾನ: ಪಿಟಿಐ ಅಧ್ಯಕ್ಷರಾಗಿ ಗೋಹರ್‌ ಖಾನ್‌?

ಪಿಟಿಐ
Published 26 ಫೆಬ್ರುವರಿ 2024, 13:39 IST
Last Updated 26 ಫೆಬ್ರುವರಿ 2024, 13:39 IST
<div class="paragraphs"><p>ಪಾಕಿಸ್ತಾನ ಧ್ವಜ</p></div>

ಪಾಕಿಸ್ತಾನ ಧ್ವಜ

   

ರಾಯಿಟರ್ಸ್‌ ಚಿತ್ರ

ಇಸ್ಲಾಮಾಬಾದ್‌ : ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್‌ ಖಾನ್ ನೇತೃತ್ವದ ಪಿಟಿಐ ಪಕ್ಷದ ಅಧ್ಯಕ್ಷ ಸ್ಥಾನವನ್ನು ಗೋಹರ್ ಖಾನ್‌ ಮತ್ತೊಮ್ಮೆ ವಹಿಸಿಕೊಳ್ಳಲಿದ್ದಾರೆ. ಅಲಿ ಜಾಫರ್ ಅವರನ್ನು ಅಧ್ಯಕ್ಷರನ್ನಾಗಿ ಮಾಡುವ ತನ್ನ ಹಿಂದಿನ ನಿರ್ಧಾರವನ್ನು ಪಕ್ಷವು ಕೈಬಿಟ್ಟಿದೆ ಎಂದು ಮಾಧ್ಯಮದ ವರದಿಯೊಂದು ಸೋಮವಾರ ತಿಳಿಸಿದೆ.

ADVERTISEMENT

ಪಾಕಿಸ್ತಾನ್ ತೆಹ್ರೀಕ್–ಇ–ಇನ್ಸಾಫ್‌ (ಪಿಟಿಐ) ಪಕ್ಷದ ಅಧ್ಯಕ್ಷರಾಗಿದ್ದ ಇಮ್ರಾನ್ ಖಾನ್ ಬಂಧನದ ಬಳಿಕ, ಪಾಕಿಸ್ತಾನ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಕಳೆದ ಡಿಸೆಂಬರ್‌ನಲ್ಲಿ ಪಕ್ಷದೊಳಗಿನ ಸಮೀಕ್ಷೆಯ ನಂತರ ಗೋಹರ್ ಖಾನ್‌ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇದನ್ನು ಪಕ್ಷದ ಕೆಲವು ಕಾರ್ಯಕರ್ತರು ಪ್ರಶ್ನಿಸಿದ್ದರು.

ಸಾರ್ವತ್ರಿಕ ಚುನಾವಣೆಗೂ ಮುನ್ನ ಪಕ್ಷವು ತನ್ನ ಚಿಹ್ನೆಯಾದ ಕ್ರಿಕೆಟ್‌ ಬ್ಯಾಟ್ ಅನ್ನು ಕಳೆದುಕೊಂಡಿತ್ತು. ಹುದ್ದೆ ತೊರೆದಿದ್ದ ಗೋಹರ್‌ ಖಾನ್‌, ಅಲಿ ಜಾಫರ್ ಪಕ್ಷದ ಮುಂದಿನ ಅಧ್ಯಕ್ಷ ಅಭ್ಯರ್ಥಿ ಎಂದು ಘೋಷಿಸಿದ್ದರು. ಮಾರ್ಚ್‌ 3ಕ್ಕೆ ಪಿಟಿಐನ ಆಂತರಿಕ ಚುನಾವಣೆ ನಿಗದಿಯಾಗಿದೆ.

‘ನಾಮಪತ್ರ ಸಲ್ಲಿಸಲು ಭಾನುವಾರ ಮಧ್ಯಾಹ್ನ 3 ಗಂಟೆವರೆಗೆ ಅವಕಾಶವಿತ್ತು. ಜಾಫರ್ ಅಧ್ಯಕ್ಷರಾಗಲು ನಿರಾಕರಿಸಿದರು. ಅಂತಿಮವಾಗಿ ಗೋಹರ್ ಖಾನ್‌ ನಾಮಪತ್ರ ಸಲ್ಲಿಸಿದರು. ಬೇರೆ ಯಾರೊಬ್ಬರೂ ನಾಮಪತ್ರ ಸಲ್ಲಿಸದ ಕಾರಣ ಖಾನ್‌ ಅಧ್ಯಕ್ಷರಾಗಿ ಆಯ್ಕೆಯಾಗುವುದು ಖಚಿತ’ ಎಂದು ಪಿಟಿಐ ಮೂಲಗಳನ್ನು ಉಲ್ಲೇಖಿಸಿ ‘ಡಾನ್’ ಪತ್ರಿಕೆ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.