ADVERTISEMENT

ಮೇ ತಿಂಗಳಿನಲ್ಲಿ ಚೀನಾಗೆ ರಷ್ಯಾ ಅಧ್ಯಕ್ಷ ಪುಟಿನ್‌ ಭೇಟಿ ಸಾಧ್ಯತೆ

ರಾಯಿಟರ್ಸ್
Published 19 ಮಾರ್ಚ್ 2024, 12:47 IST
Last Updated 19 ಮಾರ್ಚ್ 2024, 12:47 IST
<div class="paragraphs"><p>ವ್ಲಾಡಿಮಿರ್‌ ಪುಟಿನ್‌</p></div>

ವ್ಲಾಡಿಮಿರ್‌ ಪುಟಿನ್‌

   

ಬೀಜಿಂಗ್‌/ಮಾಸ್ಕೊ: ‘ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರು ಮೇ ತಿಂಗಳಿನಲ್ಲಿ ಚೀನಾಗೆ ಭೇಟಿ ನೀಡಿ, ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರೊಂದಿಗೆ ಮಾತುಕತೆ ನಡೆಸುವ ಸಾಧ್ಯತೆ ಇದೆ’ ಎಂದು ಮೂಲಗಳು ತಿಳಿಸಿವೆ.

ರಷ್ಯಾ ಅಧ್ಯಕ್ಷರಾಗಿ ಪುಟಿನ್‌ ಮರು ಆಯ್ಕೆಯಾಗಿರುವುದನ್ನು ಪಾಶ್ಚಾತ್ಯ ದೇಶಗಳು ಸೋಮವಾರ ಖಂಡಿಸಿದ್ದು, ‘ವ್ಲಾದಿಮಿರ್‌ ಅವರ ಆಯ್ಕೆ ನ್ಯಾಯೋಚಿತವಲ್ಲ ಮತ್ತು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದುದು’ ಎಂದಿದ್ದವು. ಆದರೆ, ಭಾರತ, ಚೀನಾ ಹಾಗೂ ಉತ್ತರ ಕೊರಿಯಾ ದೇಶಗಳು ಪುಟಿನ್ ಅವರನ್ನು ಅಭಿನಂದಿಸಿದ್ದವು.

ADVERTISEMENT

‘ಪುಟಿನ್‌ ಅವರು ಮೇ 15ರ ನಂತರ ಚೀನಾಗೆ ಭೇಟಿ ನೀಡಬಹುದು’ ಎಂದು ಒಂದು ಮೂಲವೊಂದು ತಿಳಿಸಿದ್ದರೆ, ‘ಜಿನ್‌ಪಿಂಗ್‌ ಅವರು ಯುರೋಪ್‌ ಪ್ರವಾಸಕ್ಕೆ ತೆರಳಲು ಯೋಜಿಸಿದ್ದು, ಅದಕ್ಕೂ ಮೊದಲೇ ಪುಟಿನ್‌ ಚೀನಾಗೆ ಭೇಟಿ ನೀಡಬಹುದು’ ಎಂದು ಮತ್ತೊಂದು ಮೂಲ ಮಾಹಿತಿ ನೀಡಿದೆ.

ಚೀನಾ ಭೇಟಿ ಬಗ್ಗೆ ಮಾಹಿತಿ ಪಡೆಯಲು ಪುಟಿನ್‌ ಅವರ ಕಚೇರಿಯನ್ನು ಸಂಪರ್ಕಿಸಲಾಯಿತಾದರೂ, ಅಲ್ಲಿನ ಅಧಿಕಾರಿಗಳು ಯಾವುದೇ ಮಾಹಿತಿ ನೀಡಲಿಲ್ಲ. ಚೀನಾದ ವಿದೇಶಾಂಗ ಸಚಿವಾಲಯ ಸಹ ಈ ಬಗ್ಗೆ ತಕ್ಷಣಕ್ಕೆ ಪ್ರತಿಕ್ರಿಯೆ ನೀಡಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.