ADVERTISEMENT

ಶಿಯಾ ನಾಗರಿಕರಿಗೆ ಗಲ್ಲು: ಆಕ್ಷೇಪ

ಏಜೆನ್ಸೀಸ್
Published 27 ಜುಲೈ 2019, 19:55 IST
Last Updated 27 ಜುಲೈ 2019, 19:55 IST

ದುಬೈ: ‌ಭಯೋತ್ಪಾದನೆ ಚಟುವಟಿಕೆ ಆರೋಪದ ಮೇಲೆ ಶಿಯಾ ಸಮುದಾಯಕ್ಕೆ ಸೇರಿದ ಇಬ್ಬರು ನಾಗರಿಕರಿಗೆ ಬಹ್ರೇನ್‌ ಶನಿವಾರ ಮರಣದಂಡನೆ ವಿಧಿಸಿದ್ದು,ಮಾನವ ಹಕ್ಕು ಸಂಘಟನೆಗಳು ಇದಕ್ಕೆಆಕ್ಷೇಪ ವ್ಯಕ್ತಪಡಿಸಿವೆ.

ಆಲಿ ಅಲ್‌–ಅರಬ್‌ (25), ಅಹ್ಮದ್‌ ಅಲ್‌ ಮಲಾಲಿ (24) ಅವರನ್ನು 2017ರಲ್ಲಿ ಬಂಧಿಸಲಾಗಿತ್ತು. ಇಬ್ಬರೂ ಉಗ್ರ ಸಂಘಟನೆ ಸ್ಥಾಪಿಸುವ ಸಂಚು ಹೂಡಿದ್ದರು ಎಂಬ ಆರೋಪ ಮಾಡಲಾಗಿತ್ತು. ಇದನ್ನು ಬಂಧಿತರ ಪೋಷಕರು ನಿರಾಕರಿಸಿದ್ದರು.ಮಾನವ ಹಕ್ಕುಗಳ ನಿರೀಕ್ಷಣಾ ಸಂಸ್ಥೆ ಮಧ್ಯಪ್ರಾಚ್ಯ ನಿರ್ದೇಶಕಿ ಲಾಮಾ ಪಕಿಹ್, ಬಂಧಿತರಿಗೆ ಗಲ್ಲು ವಿಧಿಸಿ ಅನ್ಯಾಯ ಎಸಗಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT