ವಾಷಿಂಗ್ಟನ್: ಯಾವುದೇ ಕಾರಣಕ್ಕೂ ಜಮ್ಮು-ಕಾಶ್ಮೀರ ಮತ್ತು ಭಾರತ-ಪಾಕಿಸ್ತಾನದ ಗಡಿಯ 10 ಕಿ.ಮೀ ವ್ಯಾಪ್ತಿಯಲ್ಲಿ ಸುತ್ತಾಡಬೇಡಿ ಎಂದು ಭಾರತದ ಪ್ರವಾಸ ಕೈಗೊಂಡಿರುವ ತನ್ನ ಪ್ರಜೆಗಳಿಗೆ ಅಮೆರಿಕ ಸರ್ಕಾರ ಸಲಹೆ ನೀಡಿದೆ. ಅಲ್ಲದೆ ಭಾರತದ ಪ್ರವಾಸದ ವೇಳೆ ಹೆಚ್ಚು ಎಚ್ಚರಿಕೆಯಿಂದ ಇರುವಂತೆಯೂ ಹೇಳಿದೆ.
ಭಾರತಕ್ಕೆ ಹೋಗುವವರಿಗಾಗಿ ಹೊಸ ಸಲಹೆಗಳನ್ನು ಮಂಗಳವಾರ ಬಿಡುಗಡೆ ಮಾಡಿದ ಅಮೆರಿಕ, ಭಾರತಕ್ಕೆ ಪ್ರವಾಸ ಕೈಗೊಂಡವರು ಅಪರಾಧ ಮತ್ತು ಭಯೋತ್ಪಾದನೆ ಚಟುವಟಿಕೆ ಕಾರಣದಿಂದಾಗಿ ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಜಮ್ಮು-ಕಾಶ್ಮೀರದಲ್ಲಿ ಪರಿಸ್ಥಿತಿ ಸರಿಯಿಲ್ಲ. ಹೀಗಾಗಿ ಕಾಶ್ಮೀರಕ್ಕೆ ಹೋಗಲೇಬೇಡಿ ಎಂದು ಸೂಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.