ವಾಷಿಂಗ್ಟನ್: ವಲಸೆಯ ಕಾನೂನು ಪರಿಶೀಲನೆ, ಜತೆಗೆ ಹೆಚ್–1ಬಿ ವೀಸಾದ ಮಿತಿ ಹೆಚ್ಚಳಕ್ಕೆ ಸಂಬಂಧಿಸಿ ಭಾರತದ ಸಾಫ್ಟ್‌ವೇರ್ ಎಂಜಿನಿಯರ್‌ಗಳಿಂದ ಬೇಡಿಕೆ ಹೆಚ್ಚುತ್ತಿದೆ. ಈ ಬಗ್ಗೆ ಗಮನ ಹರಿಸಬೇಕೆಂದು ಅಮೆರಿಕ ಕಾಂಗ್ರೆಸ್‌ನ ಶ್ರೀ ಥಾಣೇದಾರ್(ಬೆಳಗಾವಿ ಮೂಲದವರು) ಅವರು ಇಲ್ಲಿನ ಆಂತರಿಕ ಭದ್ರತಾ ಇಲಾಖೆಯ ಕಾರ್ಯದರ್ಶಿ ಅಲೆಜಾಂಡ್ರೊ ಮೆಯೋರ್ಕಾಸ್ ಅವರನ್ನು ಕೇಳಿಕೊಂಡಿದ್ದಾರೆ.
ಹೆಚ್–1ಬಿ ವಲಸೆ ರಹಿತ ವೀಸಾ ಆಗಿದ್ದು, ತಾಂತ್ರಿಕತೆಯಲ್ಲಿ ಪರಿಣತಿಯ ಜತೆಗೆ ವಿಶೇಷ ಜ್ಞಾನ ಹೊಂದಿರುವ ಹೊರ ದೇಶದ ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿನ ಕಂಪನಿಗಳಲ್ಲಿ ನೌಕರಿ ಪಡೆಯಲು ಅವಶ್ಯಕವಾಗಿದೆ.
ಭಾರತ ಹಾಗೂ ಚೀನಾದಂಥ ದೇಶಗಳಿಂದ ಪ್ರತಿವರ್ಷ ಸುಮಾರು 10,000ದಷ್ಟು ಅಭ್ಯರ್ಥಿಗಳಿಗೆ ಉದ್ಯೋಗ ಒದಗಿಸಲು ಅಮೆರಿಕದ ಕಂಪನಿಗಳು ಹೆಚ್–1ಬಿ ವೀಸಾವನ್ನು ಅವಲಂಬಿಸಿವೆ.
ಈ ಹಣಕಾಸು ವರ್ಷದ ಬಜೆಟ್‌ನಲ್ಲಿ ಗೃಹ ಇಲಾಖೆಗೆ ಆರ್ಥಿಕ ನೆರವು ಒದಗಿಸುವ ನಿಟ್ಟಿನಲ್ಲಿ ನಡೆದ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಥಾಣೇದಾರ್ ಅವರು ಆಂತರಿಕಾ ಭದ್ರತಾ ಕಾರ್ಯದರ್ಶಿ ಮೆಯೋರ್ಕಾಸ್ ಅವರಲ್ಲಿ ‘ಹೆಚ್–1ಬಿ ವೀಸಾ ಸಂಖ್ಯೆಗಳ ಮಿತಿಯನ್ನು ಹೆಚ್ಚಿಸುವುದು ಸೇರಿದಂತೆ ವಲಸೆ ಸಂಬಂಧಿತ ಕಾನೂನು ಮಾರ್ಗಗಳನ್ನು ವಿಸ್ತರಿಸಬೇಕು‘ ಎಂದು ಆಗ್ರಹಿಸಿದ್ದಾರೆ.
ಪ್ರತಿ ವರ್ಷ ಈ ವೀಸಾ ದೊರಕುವ ಸಂಖ್ಯೆಯನ್ನು 85,000ಕ್ಕೆ ಸೀಮಿತಗೊಳಿಸಲಾಗಿದೆ. 20,000 ವೀಸಾಗಳನ್ನು ಅಮೆರಿಕದಲ್ಲಿರುವ ಸಂಸ್ಥೆಗಳಿಂದ ಪದವಿ ಪಡೆದವರಿಗೆ ಮಾತ್ರ ಮೀಸಲಿಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.