ಪೆಶಾವರ: ಪಾಕಿಸ್ತಾನಿ ತಾಲಿಬಾನ್ಗಳ ಭದ್ರಕೋಟೆಯಾಗಿದ್ದ ಮಿರ್ ಆಲಿ ನಗರದ ಮನೆಯೊಂದರಲ್ಲಿ ಗುರುವಾರ ಭೀಕರ ಸ್ಫೋಟ ಸಂಭವಿಸಿದ್ದು, ಪರಿಣಾಮ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಸ್ಫೋಟಕ್ಕೆ ಕಾರಣ ಏನು, ದುಷ್ಕರ್ಮಿಗಳು ಬಾಂಬ್ ಇಟ್ಟಿದ್ದರೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಇರ್ಫಾನ್ ಖಾನ್ ತಿಳಿಸಿದರು.
ಮಿರ್ ಆಲಿ ನಗರವು ಅಫ್ಗಾನಿಸ್ತಾನದೊಂದಿಗೆ ಗಡಿ ಹಂಚಿಕೊಂಡಿದ್ದು, ಪಾಕಿಸ್ತಾನಿ ತಾಲಿಬಾನ್ಗಳು ಮತ್ತು ಇತರ ಒಳನುಸುಳುಕೋರರು ಆಗಾಗ್ಗೆ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.