ಕೀವ್: ಶುಕ್ರವಾರ ಮುಂಜಾನೆ ಉಕ್ರೇನ್ ರಾಜಧಾನಿ ಕೀವ್ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ಫೋಟದ ಸದ್ದುಗಳು ಕೇಳಿಸಿವೆ ಎಂದು ಸ್ಥಳೀಯ ವಾಹಿನಿಗಳು ವರದಿ ಮಾಡಿವೆ.
ಮಧ್ಯರಾತ್ರಿಯ ಬಳಿಕ ದಾಳಿ ನಡೆದಿದ್ದು, ದಾಳಿಯ ಗುರಿ ಹಾಗೂ ದಾಳಿಯಿಂದ ಉಂಟಾದ ಹಾನಿ ಬಗ್ಗೆ ಯಾವುದೇ ಮಾಹಿತಿ ಲಭಿಸಿಲ್ಲ. ಇನ್ನು ಈ ದಾಳಿಯ ಬೆನ್ನಲ್ಲೇ, ವೈಮಾನಿಕ ವಿಭಾಗವು ಕಾರ್ಯಾಚರಣೆಗೆ ಇಳಿದಿದೆ ಎಂದು ಸ್ಥಳೀಯ ನಗರಾಡಳಿತ ಹೇಳಿದೆ.
ಕೇಂದ್ರ ಉಕ್ರೇನ್‌ನಿಂದ ದಕ್ಷಿಣ ಮೈಕೋಲಿವ್ ವಯಲದ ವರೆಗೆ ದಾಳಿಗಳು ನಡೆದಿವೆ ಎಂದು ವರದಿಗಳು ತಿಳಿಸಿವೆ. ಹೀಗಾಗಿ ದೇಶದಾದ್ಯಂತ ಏರ್ ರೈಡ್ ಅಲರ್ಟ್ ಘೋಷಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.