ADVERTISEMENT

ಐದು ದಿನಗಳ ರಷ್ಯಾ ಪ್ರವಾಸ ಕೈಗೊಂಡ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌

ಪಿಟಿಐ
Published 25 ಡಿಸೆಂಬರ್ 2023, 14:14 IST
Last Updated 25 ಡಿಸೆಂಬರ್ 2023, 14:14 IST
ಎಸ್‌.ಜೈಶಂಕರ್‌
ಎಸ್‌.ಜೈಶಂಕರ್‌   

ಮಾಸ್ಕೊ: ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಅವರು ಐದು ದಿನಗಳ ರಷ್ಯಾ ಪ್ರವಾಸದ ಅಂಗವಾಗಿ ಸೋಮವಾರ ಮಾಸ್ಕೊಗೆ ಬಂದಿಳಿದರು. ಪ್ರವಾಸ ಸಂದರ್ಭದಲ್ಲಿ ಅವರು ರಷ್ಯಾ ವಿದೇಶಾಂಗ ವ್ಯವಹಾರಗಳ ಸಚಿವರೊಂದಿಗೆ ದ್ವಿಪಕ್ಷೀಯ ಮತ್ತು ಜಾಗತಿಕ ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ವಾಣಿಜ್ಯ, ಇಂಧನ, ರಕ್ಷಣೆ ಮತ್ತು ಸಂಪರ್ಕ ವಿಚಾರಗಳ ಕುರಿತು ಉಭಯ ದೇಶಗಳ ನಾಯಕರು ಚರ್ಚೆ ನಡೆಸಬಹುದು ಎಂದು ನಿರೀಕ್ಷಿಸಲಾಗಿದೆ. ಜೊತೆಗೆ ಉಪ ಪ್ರಧಾನಿ ಹಾಗೂ ಕೈಗಾರಿಕೆ ಮತ್ತು ವಾಣಿಜ್ಯ ಸಚಿವರನ್ನೂ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.

‘ಮಾಸ್ಕೊಗೆ ಬಂದಿಳಿದೆ. ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಎದುರು ನೋಡುತ್ತಿದ್ದೇನೆ’ ಎಂದು ಜೈಶಂಕರ್ ಅವರು ‘ಎಕ್ಸ್‌’ನಲ್ಲಿ ಹೇಳಿದ್ದಾರೆ. ಪ್ರವಾಸ ಸಂದರ್ಭದಲ್ಲಿ ಅವರು ಸೆಂಟ್‌ ಪೀಟರ್‌ಬರ್ಗ್‌ಗೂ ಭೇಟಿ ನೀಡಲಿದ್ದಾರೆ.

ADVERTISEMENT

‘ಹಲವು ಅಡೆತಡೆಗಳ ನಡುವೆಯೂ ಭಾರತ–ರಷ್ಯಾ ಪಾಲುದಾರಿಕೆಯು ಸ್ಥಿರ ಮತ್ತು ದೃಢವಾಗಿ ಮುಂದುವರಿಯುತ್ತಿದೆ’ ಎಂದು ವಿದೇಶಾಂಗ ಸಚಿವಾಲಯ ಭಾನುವಾರ ಹೇಳಿತ್ತು.

ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣ ನಡೆಸಿರುವ ಹೊರತಾಗಿಯೂ ಭಾರತ–ರಷ್ಯಾ ಸಂಬಂಧ ಗಟ್ಟಿಯಾಗಿ ಉಳಿದಿದೆ. ಪಾಶ್ಚಿಮಾತ್ಯ ರಾಷ್ಟ್ರಗಳ ಪ್ರಬಲ ವಿರೋಧದ ಮಧ್ಯೆಯೂ ಭಾರತ ರಷ್ಯಾದಿಂದ ಕಚ್ಚಾತೈಲವನ್ನು ಆಮದು ಮಾಡಿಕೊಳ್ಳುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.