ಲಂಡನ್: ರಷ್ಯಾ ಸರ್ಕಾರ ಒಡೆತನದ ರಾಸಿಯಾ ಸೀಗಾದ್ನಾ, ಆರ್‌ಟಿ ಹಾಗೂ ಸಂಬಂಧಪಟ್ಟ ಇತರ ಮಾಧ್ಯಮ ಸಂಸ್ಥೆಗಳನ್ನು ಮೆಟಾ ನಿಷೇಧಿಸಿದೆ.
ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ವಾಟ್ಸ್‌ಆ್ಯಪ್ ಮತ್ತು ಇನ್‌ಸ್ಟಾಗ್ರಾಮ್ ಮಾತೃಸಂಸ್ಥೆಯಾದ ಮೆಟಾ, ಪ್ರಕಟಣೆಯಲ್ಲಿ ಈ ಮಾಹಿತಿ ನೀಡಿದೆ.
‘ವಿದೇಶಿ ಹಸ್ತಕ್ಷೇಪದಂತಹ ಚಟುವಟಿಕೆ ಕಂಡುಬಂದ ಕಾರಣ, ರಷ್ಯಾ ಸರ್ಕಾರ ಒಡೆತನದ ಈ ಎಲ್ಲ ಮಾಧ್ಯಮ ಸಂಸ್ಥೆಗಳನ್ನು ಜಾಗತಿಕವಾಗಿ ಸಂಸ್ಥೆಯ ಎಲ್ಲಾ ಆ್ಯಪ್‌ಗಳಿಂದ ನಿಷೇಧಿಸಲಾಗಿದೆ’ ಎಂದು ಮೆಟಾ ತಿಳಿಸಿದೆ.
ಮೆಟಾ ನಡೆಗೆ ರಷ್ಯಾ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ‘ರಷ್ಯಾ ಮಾಧ್ಯಮಗಳನ್ನಷ್ಟೆ ಗುರಿಯಾಗಿಸಿ ಕೈಗೊಂಡ ಇಂತಹ ಕ್ರಮವನ್ನು ಒಪ್ಪಲು ಸಾಧ್ಯವಿಲ್ಲ. ಇಂತಹ ಕ್ರಮಗಳಿಂದ ಮೆಟಾ ತನ್ನ ಹೆಸರಿಗೆ ತಾನೇ ಕಳಂಕ ತಂದುಕೊಳ್ಳುತ್ತಿದೆ’ ಎಂದು ಸರ್ಕಾರದ ವಕ್ತಾರ ಡಿಮಿಟ್ರಿ ಪೆಸ್ಕೋವ್ ಟೀಕಿಸಿದ್ದಾರೆ.
ಇತ್ತೀಚೆಗೆ, ಆರ್‌ಟಿ ವಿರುದ್ಧ ಅಮೆರಿಕ ಸರ್ಕಾರ ಹೊಸದಾಗಿ ನಿರ್ಬಂಧ ಹೇರಿದ ಬೆನ್ನಲ್ಲೇ, ಮೆಟಾ ಸಂಸ್ಥೆಯೂ ಈ ಕ್ರಮ ಕೈಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.