ADVERTISEMENT

ಲಸಿಕೆಯಿಂದ ಚಿಂಪಾಂಜಿಯಾಗುವಿರಿ ಎಂದು ಪೋಸ್ಟ್: ರಷ್ಯಾದ 300 ಫೇಸ್‌ಬುಕ್ ಖಾತೆ ಬಂದ್

ಏಜೆನ್ಸೀಸ್
Published 13 ಆಗಸ್ಟ್ 2021, 13:10 IST
Last Updated 13 ಆಗಸ್ಟ್ 2021, 13:10 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಮಾಸ್ಕೊ: ಕೊರೊನಾ ವೈರಸ್‌ ಲಸಿಕೆಗಳ ಬಗ್ಗೆ ತಪ್ಪು ಮಾಹಿತಿ ಹರಡುತ್ತಿದ್ದ ಹಿನ್ನೆಲೆಯಲ್ಲಿ ರಷ್ಯಾ ಮೂಲದ 300 ಖಾತೆಗಳನ್ನು ಫೇಸ್‌ಬುಕ್‌ ಇತ್ತೀಚೆಗೆ ಬಂದ್‌ ಮಾಡಿದೆ.

ಈ ಕುರಿತು ಫೇಸ್‌ಬುಕ್ ಮಂಗಳವಾರ ಹೇಳಿಕೆ ಬಿಡುಗಡೆ ಮಾಡಿದೆ.

ಅಸ್ಟ್ರಾಜೆನೆಕಾದ ಕೋವಿಶೀಲ್ಡ್‌ ಲಸಿಕೆಯನ್ನು ಹಾಕಿಸಿಕೊಂಡರೆ ಜನರು ಚಿಂಪಾಂಜಿಗಳಾಗಿ ರೂಪಾಂತರವಾಗುತ್ತಾರೆ. ಫೈಜರ್‌ ಲಸಿಕೆ ಹಾಕಿಸಿಕೊಂಡರೆ ಸಾವಿನ ಸಾಧ್ಯತೆ ಅಧಿಕವಾಗಿರುತ್ತದೆ ಎಂಬ ದಾರಿ ತಪ್ಪಿಸುವ ಪೋಸ್ಟ್‌ಗಳನ್ನು ಹರಡಿದ ಆರೋಪದ ಮೇಲೆ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ.

ADVERTISEMENT

ಈ ಜಾಲವು ಭಾರತ, ಲ್ಯಾಟಿನ್ ಅಮೆರಿಕ ಮತ್ತು ಅಮೆರಿಕದಲ್ಲಿನ ಜನರನ್ನೇ ಗುರಿಯಾಗಿಸಿಕೊಂಡು ಅಪಪ್ರಚಾರ ಮಾಡುತ್ತಿತ್ತು ಎಂದು ಹೇಳಲಾಗಿದೆ.

ಬ್ರಿಟನ್‌ನಲ್ಲಿ ನೋಂದಾವಣೆಗೊಂಡಿರುವ ರಷ್ಯಾ ಮೂಲದ ಮಾರ್ಕೆಟಿಂಗ್‌ ಸಂಸ್ಥೆ ‘ಫಾಝ್‌’ ಈ ಅಪಪ್ರಚಾರ ನಡೆಸುತ್ತಿತ್ತು. ಈ ಜಾಲವು ನಮ್ಮ ‘ವಿದೇಶಿ ಹಸ್ತಕ್ಷೇಪ ನೀತಿ’ಗೆ ವಿರುದ್ಧವಾದದ್ದು ಎಂದು ಫೇಸ್‌ಬುಕ್‌ ತಿಳಿಸಿದೆ.

ಅಪಪ್ರಚಾರ ನಡೆಸುತ್ತಿದ್ದ ‘ಫಾಝ್‌’ಗೆ ಸಂಬಂಧಿಸಿದ 65 ಫೇಸ್‌ಬುಕ್ ಖಾತೆ, 243 ಇನ್‌ಸ್ಟಾಗ್ರಾಮ್ ಖಾತೆಗಳನ್ನು ಸ್ಥಗಿತಗೊಳಿಸಿರುವುದಾಗಿ ಹೇಳಿರುವ ಫೇಸ್‌ಬುಕ್‌, ಅದನ್ನು ತನ್ನ ವೇದಿಕೆಯಿಂದಲೇ ಹೊರಗಟ್ಟಿರುವುದಾಗಿಯೂ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.