ಬೀಜಿಂಗ್: ಕೋವಿಡ್ ಪ್ರಕರಣಗಳ ಗಣನೀಯ ಏರಿಕೆ ಹಿಂದೆಯೇ ಚಿಕಿತ್ಸೆ ಮತ್ತು ಆರೈಕೆ ಸೌಲಭ್ಯವನ್ನು ಇನ್ನಷ್ಟು ಬಲಪಡಿಸಲು ಚೀನಾ ಮುಂದಾಗಿದೆ.
ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ನೇತೃತ್ವದ ಸರ್ಕಾರ, ಜನರ ಪ್ರತಿಭಟನೆಯ ನಂತರ ಕ್ವಾರಂಟೈನ್ ಮತ್ತು ಸಂಚಾರದ ಮೇಲಿನ ನಿರ್ಬಂಧ ಸಡಿಲಿಕೆಯ ನಂತರವೂ ಸೋಂಕು ತಡೆಗೆ ಹೆಚ್ಚಿನ ಆದ್ಯತೆ ನೀಡಿದೆ.
ಪ್ರಕರಣಗಳ ಏರಿಕೆ ಹಿನ್ನೆಲೆಯಲ್ಲಿ ಪರಿಸ್ಥಿತಿ ಎದುರಿಸಲುಆಸ್ಪತ್ರೆಗಳನ್ನು ಸಜ್ಜುಗೊಳಿಸಬೇಕು. ಸಿಬ್ಬಂದಿ ಸಂಖ್ಯೆ ಹೆಚ್ಚಿಸಬೇಕು ಎಂದು ಈಚೆಗೆ ನಡೆದ ಸಂಪುಟ ಸಭೆರ್ಮಾನಿಸಿದೆ. 65 ವರ್ಷ ಮೀರಿದ ನಾಗರಿಕರ ಆರೋಗ್ಯ ರಕ್ಷಣೆಗೆ ಒತ್ತು ನೀಡಲು ನಿರ್ಧರಿಸಿದೆ.
ಎಲ್ಲ ಸಿಬ್ಬಂದಿಗೂ ಸೋಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಬೀಜಿಂಗ್‌ನಲ್ಲಿ ಸೋಂಕು ಪತ್ತೆ ತಪಾಸಣಾ ಕೇಂದ್ರವನ್ನು ಮುಚ್ಚಲಾಗಿದೆ ಎಂದು ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ.
ಅಂಕಿ ಅಂಶದ ಪ್ರಕಾರ, ಭಾನುವಾರ 10,815 ಹೊಸ ಪ್ರಕರಣಗಳು ವರದಿಯಾಗಿವೆ. ಈ ಪೈಕಿ 8,477 ಪ್ರಕರಣಗಳಲ್ಲಿ ರೋಗಲಕ್ಷಣಗಳಿಲ್ಲ. ಕಳೆದ ಪಾಕ್ಷಿಕದಲ್ಲಿ ಸರಾಸರಿ 40 ಸಾವಿರ ಪ್ರಕರಣ ವರದಿಯಾಗುತ್ತಿದ್ದು, ಈಗ ತುಸು ಕಡಿಮೆ ಆಗಿದೆ.
ಚೀನಾದ ಅಧಿಕೃತ ಪ್ರಕರಣಗಳ ಸಂಖ್ಯೆ ಈಗ 363,072 ಆಗಿದೆ. ಈ ಪೈಕಿ ಶೇ 50ರಷ್ಟು ಪ್ರಕರಣಗಳು ಅಕ್ಟೋಬರ್ 1ರ ನಂತರ ವರದಿಯಾದ ಪ್ರಕರಣಗಳಾಗಿವೆ. ನಿರ್ಬಂಧ ಕ್ರಮಗಳ ವಿರುದ್ಧ ಈಚೆಗೆ ನಾಗರಿಕರು ತೀವ್ರ ಪ್ರತಿಭಟನೆ ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.