ADVERTISEMENT

ವಿಮಾನ ಕಣ್ಮರೆ: ದೊರೆಯದ ಸುಳಿವು

ಏಜೆನ್ಸೀಸ್
Published 30 ಜುಲೈ 2018, 18:55 IST
Last Updated 30 ಜುಲೈ 2018, 18:55 IST

ಕ್ವಾಲಾಲಂಪುರ: ನಾಲ್ಕು ವರ್ಷದ ಹಿಂದೆ ನಿಗೂಢವಾಗಿ ಕಣ್ಮರೆಯಾದ ಎಂಎಚ್‌ 370 ವಿಮಾನ ಕುರಿತ ಅಧಿಕೃತ ತನಿಖಾ ವರದಿ ಸೋಮವಾರ ಬಿಡುಗಡೆಗೊಂಡಿದ್ದು, ಯಾವುದೇ ಹೊಸ ಸುಳಿವು ಸಿಕ್ಕಿರುವ ಬಗ್ಗೆ ಖಚಿತ ಮಾಹಿತಿ ನೀಡಿಲ್ಲ. ವಿಮಾನದಲ್ಲಿ ಸಾವನ್ನಪ್ಪಿದ ಪ್ರಯಾಣಿಕರ ಸಂಬಂಧಿಕರ ಆಕ್ರೋಶಕ್ಕೆ ಈ ವರದಿ ಗುರಿಯಾಗಿದೆ.

ತಾಂತ್ರಿಕ ಕಾರಣಕ್ಕಿಂತಲೂ ಸಿಬ್ಬಂದಿಯ ಲೋಪವನ್ನೇ ಹೆಚ್ಚು ಎತ್ತಿಹಿಡಿಯಲಾಗಿದ್ದು, ಸರ್ಕಾರ ಮತ್ತು ವೈಮಾನಿಕ ಸಂಸ್ಥೆಯ ವೈಫಲ್ಯವನ್ನು ಅಧಿಕೃತ ತನಿಖಾ ತಂಡದ ವರದಿಯಲ್ಲಿ ಬೊಟ್ಟುಮಾಡಲಾಗಿದೆ.

ಸಿಬ್ಬಂದಿ ಮತ್ತು ಪ್ರಯಾಣಿಕರು ಸೇರಿದಂತೆ ಒಟ್ಟು 239ಜನರಿದ್ದ ಮಲೇಷ್ಯಾದ ಎಂಎಚ್‌ 370 ವಿಮಾನವು 2014ರ ಮಾರ್ಚ್‌ 8ರಂದು ಕ್ವಾಲಾಲಂಪುರದಿಂದ ಬೀಜಿಂಗ್‌ಗೆ ತೆರಳುವಾಗ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.