ನವದೆಹಲಿ: ನಗರ ಪ್ರದೇಶಗಳಲ್ಲಿರುವ ಸಾರಿಗೆ ವ್ಯವಸ್ಥೆಯನ್ನು ಉನ್ನತೀಕರಿಸುವುದಕ್ಕಾಗಿ ₹18 ಸಾವಿರ ಕೋಟಿ ಹಣವನ್ನು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ತೆಗೆದಿರಿಸಲಾಗಿದೆ.
ಇದೇ ವೇಳೆ, ಡಿಸೆಂಬರ್ 2023ರ ಒಳಗೆ ಶೇ 100ರಷ್ಟು ಬ್ರಾಡ್‌ಗೇಜ್ ರೈಲು ಮಾರ್ಗವನ್ನು ವಿದ್ಯುದ್ದೀಕರಣಗೊಳಿಸುವುದಾಗಿ ಸಚಿವೆ ನಿರ್ಮಲಾ ಹೇಳಿದ್ದಾರೆ.
ರೈಲ್ವೆ ಇಲಾಖೆಗೆ ₹1,10,055 ಕೋಟಿ ಹಣವನ್ನು ನೀಡುವುದಾಗಿ ಪ್ರಕಟಿಸಿರುವ ಸಚಿವರು, ಅದರಲ್ಲಿ 2021–22ನೇ ಸಾಲಿನಲ್ಲಿ ₹1,07,100 ಕೋಟಿಯನ್ನು ಬಂಡವಾಳ ವೆಚ್ಚವಾಗಿ ಬಳಕೆಯಾಗುವುದಾಗಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.