ಹೆಲ್ಸಿಂಕಿ: ಪಾರ್ಟಿಯೊಂದರಲ್ಲಿ ಸ್ನೇಹಿತರೊಂದಿಗೆ ಪಾಲ್ಗೊಂಡು ನೃತ್ಯ ಮಾಡಿದ್ದ ವಿಡಿಯೊ ಬಹಿರಂಗವಾಗಿ ಸುದ್ದಿಯಾಗಿದ್ದ ಫಿನ್‌ಲೆಂಡ್ ಪ್ರಧಾನಿ ಸನ್ನಾ ಮಾರಿನ್, ಡ್ರಗ್ಸ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಪಡೆದುಕೊಂಡಿದ್ದಾರೆ.
ಪ್ರಧಾನಿ ಮಾರಿನ್ ಅವರು ಪಾರ್ಟಿಯಲ್ಲಿ ಡ್ರಗ್ಸ್ ಸೇವಿಸಿದ್ದಾರೆ ಎಂಬ ಆರೋಪದ ಬೆನ್ನಲ್ಲೇ, ಡ್ರಗ್ಸ್ ಪರೀಕ್ಷೆಗೆ ಒಳಗಾಗಿದ್ದರು. ಜತೆಗೆ ಡ್ರಗ್ಸ್ ಸೇವಿಸಿರುವ ಆರೋಪವನ್ನು ಅವರು ನಿರಾಕರಿಸಿದ್ದರು.
ಅವರ ರಕ್ತ ಮತ್ತು ಮೂತ್ರದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿ, ಕೊಕೇನ್, ಗಾಂಜಾ ಸಹಿತ ಯಾವುದಾದರೂ ಮಾದಕ ದ್ರವ್ಯ ಸೇವಿಸಿದ್ದರೆಯೇ ಎಂದು ಪರಿಶೀಲಿಸಲಾಗಿತ್ತು.
ಆದರೆ, ಪ್ರಧಾನಿ ಮಾರಿನ್ ಅವರು ಯಾವುದೇ ಡ್ರಗ್ಸ್ ಸೇವಿಸಿಲ್ಲ. ಪರೀಕ್ಷಾ ವರದಿ ನೆಗೆಟಿವ್ ಬಂದಿದೆ ಎಂದು ಅವರ ವಿಶೇಷ ಸಲಹೆಗಾರರು ಹೇಳಿದ್ದಾರೆ.
ಕಳೆದ ವಾರ ಪ್ರಧಾನಿ ಪಾರ್ಟಿ ವಿಡಿಯೊ ಸೋರಿಕೆಯಾಗಿ, ವೈರಲ್ ಆಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.