ADVERTISEMENT

ಪೆರು ದೇಶದ ಚಿನ್ನದ ಗಣಿಯಲ್ಲಿ ಅಗ್ನಿ ದುರಂತ: 27 ಕಾರ್ಮಿಕರು ಸಾವು

100 ಮೀಟರ್‌ ಆಳದಲ್ಲಿ ಶಾರ್ಟ್‌ ಸರ್ಕಿಟ್

ಎಪಿ
Published 8 ಮೇ 2023, 11:17 IST
Last Updated 8 ಮೇ 2023, 11:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಿಮಾ: ಪೆರುವಿನ ದಕ್ಷಿಣ ಭಾಗದಲ್ಲಿಯ ಚಿನ್ನದ ಗಣಿಯೊಂದರಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದ ಅಗ್ನಿ ದುರಂತದಲ್ಲಿ  ಕನಿಷ್ಠ 27 ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಅಲ್ಲಿಯ ಅಧಿಕಾರಿಗಳು ತಿಳಿಸಿದ್ದಾರೆ.

ದುರಂತ ಸಂಭವಿಸಿದ ಸ್ಥಳದಿಂದ ಒಟ್ಟು 175 ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತರಲಾಗಿದೆ. ಗುತ್ತಿಗೆದಾರರೊಬ್ಬರ ಅಡಿ ಕೆಲಸ ಮಾಡುತ್ತಿದ್ದ 27 ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಯಾನಕ್ವಿಹುವಾ ಗಣಿ ಕಂಪನಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

ಗಣಿಯೊಳಗೆ ಸುಮಾರು 100 ಮೀಟರ್‌ ಆಳದಲ್ಲಿ ಶಾರ್ಟ್‌ ಸರ್ಕಿಟ್ ಸಂಭವಿಸಿದ್ದು ಈ ದುರಂತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಕೆಲ ಸುದ್ದಿಪತ್ರಿಕೆಗಳು ವರದಿ ಮಾಡಿವೆ. ಗಣಿಯೊಳಗೆ ಬೆಂಕಿ ಹೊತ್ತಿಕೊಳ್ಳಲು ನಿಖರವಾದ ಕಾರಣ ಏನು ಎಂಬುದನ್ನು ತಿಳಿಯಲು ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಮೃತರ ಕುಟುಂಬ ಸದಸ್ಯರನ್ನು ಗಣಿ ಬಳಿಗೆ ಬಸ್‌ಗಳ ಮೂಲಕ ಕರೆತರಲಾಯಿತು. ತಮ್ಮ ಪ್ರೀತಿ ಪಾತ್ರರ ಮೃತದೇಹಗಳನ್ನು ಪಡೆಯಲು ಅವರು ಗಣಿ ಎದುರು ಕಾದುಕುಳಿತಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.