ಲಂಡನ್: ಬ್ರಿಟನ್ನ ಸಂಸತ್ತಿಗೆ ವೇಲ್ಸ್ನಿಂದ ಆಯ್ಕೆಯಾಗಿರುವ ಭಾರತ ಮೂಲದ ಮೊದಲಿಗರಾದ ಕಾನಿಷ್ಕ ನಾರಾಯಣ್ ಶೀಘ್ರದಲ್ಲಿಯೇ ದೆಹಲಿಗೆ ಭೇಟಿ ನೀಡಲಿದ್ದಾರೆ.
ಪರಿಸರ ನೀತಿ ಕುರಿತ ವಿಚಾರ ವಿನಿಮಯ ಉದ್ದೇಶದಿಂದ ನಿಯೋಗದ ಭೇಟಿ ಭಾಗವಾಗಿ ಅವರು ವಾರಾಂತ್ಯದಲ್ಲಿ ಭಾರತಕ್ಕೆ ಆಗಮಿಸಲಿದ್ದಾರೆ. ಇವರು ಬಿಹಾರ ಮೂಲದವರು. ಇವರು ಬಾಲಕರಾಗಿದ್ದಾಗಲೇ ಇವರ ಕುಟುಂಬ ವಲಸೆ ಹೋಗಿತ್ತು.
‘ವೈಯಕ್ತಿಕ ಮತ್ತು ವೃತ್ತಿಯಿಂದ ಭಾರತದ ಜೊತೆಗೆ ಬಾಂಧವ್ಯವಿದೆ. ಸಹೋದ್ಯೋಗಿಗಳು ಮತ್ತು ಭಾರತದ ಸಂಸದರೊಂದಿಗೆ ಪರಿಸರ ನೀತಿ ಕುರಿತ ವಿಚಾರ ವಿನಿಮಯಕ್ಕೆ ಉತ್ಸುಕನಾಗಿದ್ದೇನೆ’ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.