ಲಂಡನ್: ರಾಣಿ 2ನೇ ಎಲಿಜಬೆತ್ ಅವರ ಅಂತ್ಯಕ್ರಿಯೆಗೆ ಸುಮಾರು 500 ವಿದೇಶಿ ಗಣ್ಯರು ಸೇರುವ ನಿರೀಕ್ಷೆ ಇದೆ ಎಂದು ಬ್ರಿಟನ್ ಅಧಿಕಾರಿಗಳು ಹೇಳಿದ್ದಾರೆ.
ಆದರೆ ರಷ್ಯಾ, ಬೆಲಾರಸ್ ಹಾಗೂ ಮ್ಯಾನ್ಮಾರ್‌ನ ನಾಯಕರಿಗೆ ಆಹ್ವಾನ ಕಳಿಸಲಾಗಿಲ್ಲ.
ಅಂತ್ಯಕ್ರಿಯೆಗೆ, ತಮ್ಮ ಪತ್ನಿ ಜಿಲ್ ಬೈಡೆನ್‌ರೊಂದಿಗೆ ತೆರಳುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಈ ಮೊದಲೇ ಘೋಷಿಸಿದ್ದರು. ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಕೆನಡಾ ದೇಶದ ಗಣ್ಯರು ಸೇರಿದಂತೆ ಕಾಮನ್‌ವೆಲ್ತ್ ದೇಶಗಳ ಗಣ್ಯರು ಆಗಮಿಸುವ ನಿರೀಕ್ಷೆ ಇದೆ.
ಫ್ರಾನ್ಸ್‌ನ ಎಮ್ಯಾನುಯೆಲ್ ಮ್ಯಾಕ್ರನ್, ಜರ್ಮನಿಯ ಫ್ರಾಂಕ್ ವಾಲ್ಟರ್ ಸ್ಟೈನ್‌ಮೈರ್, ಇಟಲಿಯ ಸೆರ್ಗಿಯೋ ಮಟ್ಟರೆಲ್ಲಾ, ಟರ್ಕಿಯ ರೆಸೆಪ್ ತಯ್ಯಿಪ್ ಎರ್ಡೊಗನ್ ಮತ್ತು ಬ್ರೆಜಿಲ್‌ನ ಜೈರ್ ಬೋಲ್ಸನಾರೊ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ.
ಜಪಾನ್‌ನ ಚಕ್ರವರ್ತಿ ನರುಹಿಟೊ ಮತ್ತು ಸ್ಪೇನ್‌ನ ರಾಜ 4ನೇ ಫಿಲಿಪ‍್ ಮತ್ತು ರಾಣಿ ಲೆಟಿಜಿಯಾ, ಸ್ಪ್ಯಾನಿಷ್ ಮಾಜಿ ದೊರೆ 1ನೇ ಜುವಾನ್ ಕಾರ್ಲೋಸ್ ಮತ್ತು ರಾಣಿ ಸೋಫಿಯಾ ಕೂಡ ಭಾಗವಹಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.