ಲಾಹೋರ್: ‘ಕಿವಿ ಕೇಳಿಸದ ಭಾರತದ ಪ್ರಜೆಯೊಬ್ಬ ಸಟ್ಲೆಜ್ ನದಿಯಲ್ಲಿ ಉಂಟಾದ ಪ್ರವಾಹದಿಂದಾಗಿ ದೇಶಕ್ಕೆ ಕೊಚ್ಚಿಕೊಂಡು ಬಂದಿದ್ದು, ಆತನನ್ನು ಗುಪ್ತಚರ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ’ ಎಂದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
‘ಸುಮಾರು 50 ವರ್ಷದ ಈ ವ್ಯಕ್ತಿ ಪಂಜಾಬ್ ಪ್ರಾಂತ್ಯದ ಕಸೂರ್ ಜಿಲ್ಲೆಯ ಗಂದಾ ಸಿಂಗ್ ವಾಲಾ ಎಂಬ ಹಳ್ಳಿಯಲ್ಲಿ ಮಂಗಳವಾರ ಪತ್ತೆಯಾಗಿದ್ದಾರೆ. ಸಂಕೇತ ಭಾಷೆಯ ಮೂಲಕ ಮಾತ್ರವೇ ಆತನೊಂದಿಗೆ ಸಂವಹಿಸಬಹುದಾಗಿದೆ. ತಾನೊಬ್ಬ ಹಿಂದೂ ಹಾಗೂ ಪ್ರವಾಹವು ತನ್ನನ್ನು ಇಲ್ಲಿಯವರೆಗೆ ಸೆಳೆದುಕೊಂಡು ಬಂದಿತು ಎಂದು ಆತ ಹೇಳಿದ್ದಾನೆ’ ಎಂದು ರಕ್ಷಣಾ ವಕ್ತಾರರೊಬ್ಬರು ಮಾಹಿತಿ ನೀಡಿದರು.
ವೈದ್ಯಕೀಯ ಪರೀಕ್ಷೆಯ ಬಳಿಕ ಆತನನ್ನು ಗುಪ್ತಚರ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.