ADVERTISEMENT

ವಿದೇಶ ಹಿನ್ನೋಟ 2019: ಐಎಂಎಫ್‌ಗೆ ಹೊಸ ಮುಖ್ಯಸ್ಥೆ ಕ್ರಿಸ್ಟಲಿನಾ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2019, 19:45 IST
Last Updated 30 ಡಿಸೆಂಬರ್ 2019, 19:45 IST
ಆರ್ಥಿಕತಜ್ಞೆ ಕ್ರಿಸ್ಟಿಲಿನಾ ಜಿ.
ಆರ್ಥಿಕತಜ್ಞೆ ಕ್ರಿಸ್ಟಿಲಿನಾ ಜಿ.   

ಐಎಂಎಫ್‌’ಗೆ ಹೊಸ ಮುಖ್ಯಸ್ಥೆ
ಸೆಪ್ಟೆಂಬರ್: ಐಎಂಎಫ್‌’ಗೆ ಕ್ರಿಸ್ಟಲಿನಾ ಹೊಸ ಮುಖ್ಯಸ್ಥೆ: ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್‌) ಹೊಸ ಮುಖ್ಯಸ್ಥೆಯಾಗಿ ಬಲ್ಗೆರಿಯಾದ ಆರ್ಥಿಕತಜ್ಞೆ ಕ್ರಿಸ್ಟಿಲಿನಾ ಜಿ. (66) ನೇಮಕ

ಎಸ್‌ಬಿಐನ ಹೊಸ ಸೇವಾ ಶುಲ್ಕ: ಅಕ್ಟೋಬರ್‌ 1ರಿಂದ ಜಾರಿಗೆ ಬರುವಂತೆ ತನ್ನ ವಿವಿಧ ಸೇವಾ ಶುಲ್ಕಗಳನ್ನು ಪರಿಷ್ಕರಿಸಿದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ

ಗೌರವಾನ್ವಿತಕಂಪನಿ ಪಟ್ಟಿಯಲ್ಲಿ ‘ಇನ್ಫಿ’ಗೆ ಬಡ್ತಿ : ಫೋರ್ಬ್ಸ್‌ ನಿಯತಕಾಲಿಕ ಪ್ರಕಟಿಸಿದ ಗ್ರಾಹಕರ ಮನ್ನಣೆಗೆ ‍ಪಾತ್ರವಾಗಿರುವ ಮುಂಚೂಣಿ ಕಂಪನಿಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಬಡ್ತಿ ಪಡೆದ ಬೆಂಗಳೂರಿನ ಐ.ಟಿ ದೈತ್ಯ ಸಂಸ್ಥೆ ಇನ್ಫೊಸಿಸ್‌

ADVERTISEMENT

ಅಕ್ಟೋಬರ್: ಗೃಹ, ವಾಹನ ಸಾಲ ಅಗ್ಗ: ದೇಶಿ ಆರ್ಥಿಕತೆಯಲ್ಲಿ ಖರೀದಿ ಉತ್ಸಾಹ ಬಡಿದೆಬ್ಬಿಸಲು ಭಾರತೀಯ ರಿಸರ್ವ್‌ ಬ್ಯಾಂಕ್‌, ತನ್ನ ಅಲ್ಪಾವಧಿ ಬಡ್ಡಿ ದರಗಳನ್ನು ಸತತ ಐದನೇ ಬಾರಿಗೆ ಕಡಿತಗೊಳಿಸಿದ್ದರಿಂದ ಗೃಹ, ವಾಹನ ಖರೀದಿ ಸಾಲ ಅಗ್ಗ

ಕೇರಳ ಬ್ಯಾಂಕ್‌ಗೆ ಆರ್‌ಬಿಐ ಸಮ್ಮತಿ: ಜಿಲ್ಲಾ ಸಹಕಾರಿ ಬ್ಯಾಂಕ್‌ಗಳನ್ನು (ಡಿಸಿಬಿ) ಕೇರಳ ರಾಜ್ಯ ಸಹಕಾರ ಬ್ಯಾಂಕ್‌ನಲ್ಲಿ ವಿಲೀನಗೊಳಿಸಿ, ‘ಕೇರಳ ಬ್ಯಾಂಕ್‌’ ಸ್ಥಾಪಿಸುವುದಕ್ಕೆ ಆರ್‌ಬಿಐ ಸಮ್ಮತಿ

ಕುಸಿದ ಗ್ರಾಹಕರ ವಿಶ್ವಾಸ: ಹಣಕಾಸು ಪರಿಸ್ಥಿತಿ, ಉದ್ಯೋಗ ಅವಕಾಶ, ಬೆಲೆ ಮಟ್ಟ, ಆದಾಯ ಮತ್ತು ವೆಚ್ಚದ ಮೇಲೆ ಪ್ರಭಾವ ಬೀರುವ ಸರ್ಕಾರ ಕೈಗೊಳ್ಳುವ ನಿರ್ಧಾರಗಳ ಕುರಿತು ಗ್ರಾಹಕರ ವಿಶ್ವಾಸ ಕುಸಿದಿರುವುದನ್ನು ದೃಢಪಡಿಸಿದ ಆರ್‌ಬಿಐ

ಜಿಡಿಪಿ ಶೇ 6ಕ್ಕೆ ತಗ್ಗಿಸಿದ ವಿಶ್ವಬ್ಯಾಂಕ್‌: ಆರ್ಥಿಕತೆಯ ಬಹುತೇಕ ವಲಯಗಳಲ್ಲಿ ಮಂದಗತಿ ದಾಖಲಾಗಿರುವುದರಿಂದ ಭಾರತದ ಆರ್ಥಿಕ ವೃದ್ಧಿ ದರವು (ಜಿಡಿಪಿ) ಶೇ 6ಕ್ಕೆ ಇಳಿಕೆಯಾಗಲಿದೆ ಎಂದು ಅಂದಾಜಿಸಿದ ವಿಶ್ವ ಬ್ಯಾಂಕ್‌

ಯೆಸ್‌ ಬ್ಯಾಂಕ್‌ಗೆ ಅನಿತಾ ನೇಮಕ: ಖಾಸಗಿ ವಲಯದ ಯೆಸ್‌ ಬ್ಯಾಂಕಿನ ಮುಖ್ಯ ನಿರ್ವಹಣಾ ಅಧಿಕಾರಿಯಾಗಿ ಮಂಗಳೂರು ಮೂಲದ ಅನಿತಾ ಪೈ ನೇಮಕ

ಅಭಿಜಿತ್‌ ಬ್ಯಾನರ್ಜಿಗೆ ಅರ್ಥಶಾಸ್ತ್ರ ನೊಬೆಲ್‌: ಭಾರತ ಸಂಜಾತ ಅಮೆರಿಕ ಪ್ರಜೆ ಅಭಿಜಿತ್‌ ಬ್ಯಾನರ್ಜಿ, ಅವರ ಪತ್ನಿ ಎಸ್ತರ್‌ ಡಫ್ಲೊ ಮತ್ತು ಮಿಷೆಲ್‌ ಕ್ರಿಮರ್‌ ಅವರಿಗೆ 2019 ನೇ ಸಾಲಿನ ಅರ್ಥಶಾಸ್ತ್ರ ನೊಬೆಲ್‌ ಪ್ರಶಸ್ತಿ

ಸುಲಲಿತ ವಹಿವಾಟು; ಭಾರತಕ್ಕೆ ಬಡ್ತಿ: ವಿಶ್ವಬ್ಯಾಂಕ್‌ ‍ಪ್ರಕಟಿಸಿರುವ ಸುಲಲಿತ ಉದ್ದಿಮೆ ವಹಿವಾಟಿನ ಜಾಗತಿಕ ಶ್ರೇಯಾಂಕದಲ್ಲಿ 63ನೇ ಸ್ಥಾನಕ್ಕೆ ಬಡ್ತಿ ಪಡೆದ ಭಾರತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.