ಇಸ್ಲಾಮಾಬಾದ್: ವಿದೇಶಿ ಸಂಸ್ಥೆಗಳನ್ನು ನೇಮಿಸಿಕೊಳ್ಳಲು ಈಗಿರುವ ನಿಯಮಗಳನ್ನು ಪಾಕಿಸ್ತಾನ ಸಚಿವ ಸಂಪುಟ ಸಡಿಲಗೊಳಿಸಿದೆ.
ಕೌಶಲರಹಿತ ಅಧಿಕಾರಿಗಳ ಬದಲು ವಿದೇಶಿ ಪ್ರತಿಭೆ ಮನ್ನಣೆ ನೀಡುವುದು ಮತ್ತು ವಿವಿಧ ಯೋಜನೆಗಳಿಗೆ ಕೊಲ್ಲಿ ಮತ್ತು ಇತರ ರಾಷ್ಟ್ರಗಳಿಂದ ಹೆಚ್ಚು ಹೂಡಿಕೆಯನ್ನು ಆಕರ್ಷಿಸುವುದು ಈ ಯೋಜನೆಯ ಉದ್ದೇಶವಾಗಿದೆ.
‘ವಿದೇಶಿ ಹೂಡಿಕೆಯನ್ನು ಆಕರ್ಷಿಸಲು ಕಳೆದ ವರ್ಷ ನಾಗರಿಕ ಸೇನಾ ಸಂಸ್ಥೆ ರಚಿಸಿದ್ದ ವಿಶೇಷ ಹೂಡಿಕೆ ಸೌಕರ್ಯ ಮಂಡಳಿಗೆ(ಎಸ್ಐಎಫ್ಸಿ) ಉತ್ತೇಜನ ನೀಡಲು ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಎಕ್ಸ್ಪ್ರೆಸ್ ಟ್ರಿಬ್ಯುನ್ ಪತ್ರಿಕೆ ವರದಿ ಮಾಡಿದೆ.
‘ಯೋಜನೆಯನ್ನು ರೂಪಿಸಲು ಮತ್ತು ಅನುಷ್ಠಾನಗೊಳಿಸಲು ವಿಫಲವಾಗಿರುವ ಪಾಕಿಸ್ತಾನಿ ಅಧಿಕಾರಿಗಳ ಬದಲು ಈ ವಿದೇಶಿ ಸಂಸ್ಥೆಗಳನ್ನು ಐದು ವರ್ಷಗಳ ಅವಧಿಗೆ ನೇಮಿಸಿಕೊಳ್ಳಲಾಗುತ್ತಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅಧಿಕಾರಿಗಳ ವೈಫಲ್ಯಗಳ ಬಗ್ಗೆ ಎಸ್ಐಎಫ್ಸಿಯು ಸರ್ಕಾರಕ್ಕೆ ತಿಳಿಸಿದ್ದು, ಹೀಗಾಗಿ, ಸಚಿವಸಂಪುಟವು ಕೆಲ ನಿಯಮಗಳನ್ನು ಸಡಿಲಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.