ನ್ಯೂಯಾರ್ಕ್: ಜೀವನದಲ್ಲಿ ಜಿಗುಪ್ಸೆಗೊಂಡು ಮಾಜಿ ಮಿಸ್ ಅಮೆರಿಕ ಚೆಸ್ಲಿ ಕ್ರಿಸ್ಟ್ (30) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನ್ಯೂಯಾರ್ಕ್‌ನ ಮ್ಯಾನ್‌ಹ್ಯಾಟನ್ ಪ್ರದೇಶದ ಕಟ್ಟಡವೊಂದರಿಂದ ಜಿಗಿದು ಚೆಸ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲವಾದರೂ ಜೀವನದಲ್ಲಿ ಜಿಗುಪ್ಸೆಗೊಂಡಿದ್ದರು ಎಂದು ಕುಟುಂಬದವರು ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
30 ವರ್ಷದ ಈ ಮಾಡೆಲ್ 2019 ರಲ್ಲಿ ಮಿಸ್ ಯುಎಸ್ಎ ಗೆದ್ದಿದ್ದರು. ‘ಚೆಸ್ಲಿ ನಿಧನದಿಂದ ನಮಗೆ ತೀವ್ರ ಆಘಾತವಾಗಿದೆ‘ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.
ಚೆಸ್ಲಿ ಆತ್ಮಹತ್ಯೆಗೂ ಮುನ್ನ ಈ ದಿನ ನಿಮ್ಮ ಬಾಳಿನಲ್ಲಿ ಶಾಂತಿ ನೆಮ್ಮದಿ ತರಬಹುದು ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಾಕಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಚೆಸ್ಲಿ ಅವರು ಅಮೆರಿಕದ ಮನರಂಜನಾ ಚಾನೆಲ್ ಎಕ್ಸ್‌ಟ್ರಾ ಟಿವಿಗೆ ನಿರೂಪಕಿಯಾಗಿ ಗಮನ ಸೆಳೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.