ಲಾಸ್ ಅಲ್ಟೊಸ್ (ಅಮೆರಿಕ): ಪ್ರಮುಖ ಸಾಫ್ಟ್‌ವೇರ್ ಕಂಪನಿ ಅಡೋಬಿಯ ಸಹ-ಸಂಸ್ಥಾಪಕ ಹಾಗೂ ಪೋರ್ಟೆಬಲ್ ಡಾಕ್ಯುಮೆಂಟ್ ಫಾರ್ಮ್ಯಾಟ್ (ಪಿಡಿಎಫ್) ತಂತ್ರಜ್ಞಾನವನ್ನು ರೂಪಿಸುವಲ್ಲಿ ನೆರವಾಗಿದ್ದ ಚಾರ್ಲ್ಸ್ ‘ಚಕ್’ ಗೆಶ್ಕೆ (81) ಅವರು ಶುಕ್ರವಾರ ನಿಧನರಾದರು.
ಗೆಶ್ಕೆ ಅವರು ಸ್ಯಾನ್ ಫ್ರಾನ್ಸಿಸ್ಕೊನ ಕೊಲ್ಲಿ ಪ್ರದೇಶದ ಉಪನಗರ ಲಾಸ್ ಅಲ್ಟೊಸ್‌ನಲ್ಲಿ ವಾಸವಾಗಿದ್ದರು.
‘ಚಾರ್ಲ್ಸ್ ಚಕ್ ಅವರ ನಿಧನದಿಂದಾಗಿ ಅಡೋಬಿ ಸಮುದಾಯ ಮತ್ತು ತಂತ್ರಜ್ಞಾನ ಉದ್ಯಮಕ್ಕೆ ಭಾರಿ ನಷ್ಟವಾಗಿದೆ. ಅವರು ನಮಗೆ ದಶಕಗಳಿಂದ ಮಾರ್ಗದರ್ಶಕ ಮತ್ತು ನಾಯಕರಾಗಿದ್ದರು’ ಎಂದು ಅಡೋಬಿ ಸಿಇಒ ಶಂತನು ನಾರಾಯಣ್ ಅವರು ತಮ್ಮ ಸಿಬ್ಬಂದಿಗೆ ಕಳುಹಿಸಿರುವ ಇಮೇಲ್ ಸಂದೇಶದಲ್ಲಿ ಅಭಿಪ್ರಾಯ ಹಂಚಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.