ADVERTISEMENT

ಆಸ್ಟ್ರೇಲಿಯಾ: ಭಾರತದ ನಾಲ್ವರು ಸಮುದ್ರಪಾಲು

ಪಿಟಿಐ
Published 25 ಜನವರಿ 2024, 12:58 IST
Last Updated 25 ಜನವರಿ 2024, 12:58 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಮೆಲ್ಬರ್ನ್: ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯದಲ್ಲಿ ಸಮುದ್ರ ತೀರದಲ್ಲಿ ವಿಹಾರಕ್ಕೆ ತೆರಳಿದ್ದ, ಭಾರತದ ಒಂದೇ ಕುಟುಂಬದ ನಾಲ್ವರು ನೀರುಪಾಲಾಗಿದ್ದಾರೆ. ಮೃತರಲ್ಲಿ ಮೂವರು ಮಹಿಳೆಯರು.

ಕಾವಲುಗಾರರರು ಇಲ್ಲದ ಫಿಲಿಪ್‌ ದ್ವೀಪ ಪ್ರದೇಶದಲ್ಲಿ ಬುಧವಾರ ಅವಘಡ ಸಂಭವಿಸಿದೆ. ಜಗಜೀತ್ ಸಿಂಗ್ ಆನಂದ್ (23), ವಿದ್ಯಾರ್ಥಿಗಳಾದ, 20 ವರ್ಷದ ಸುಹಾನಿ ಆನಂದ್, ಕೀರ್ತಿ ಬೇಡಿ ಹಾಗೂ 43 ವರ್ಷದ ರೀಮಾ ಸೋಂಧಿ ಮೃತಪಟ್ಟವರು. 

ADVERTISEMENT

ಆಸ್ಟ್ರೇಲಿಯಾದ ಕ್ಲೈಡ್‌ನಲ್ಲಿ ನೆಲಸಿದ್ದ ತಮ್ಮ ಕುಟುಂಬದ ಮೂವರನ್ನು ಭೇಟಿಯಾಗಲು ಸೋಂಧಿ ಈಚೆಗೆ ತೆರಳಿದ್ದರು. ಜಗಜೀತ್ ಸಿಂಗ್ ಆನಂದ್ ಆಸ್ಪ್ರೇಲಿಯಾ ಪ್ರಜೆಯಾಗಿದ್ದರೆ, ಪಂಜಾಬ್‌ ಮೂಲದ ಇತರ ಇಬ್ಬರು ವಿದ್ಯಾರ್ಥಿಗಳು ವೀಸಾದ ಮೇಲೆ ಅಲ್ಲಿಗೆ ತೆರಳಿದ್ದರು.

ಒಟ್ಟು 10 ಜನರು ಸಮುದ್ರ ತೀರಕ್ಕೆ ವಿಹಾರ ಹೋಗಿದ್ದರು ಎಂದು ಸ್ಥಳೀಯ ನ್ಯೂಸ್‌ ಡಾಟ್‌ ಕಾಂ ಸುದ್ದಿ ಪೋರ್ಟಲ್‌ ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.