ವಾಷಿಂಗ್ಟನ್/ಒಟ್ಟಾವ: ಖಾಲಿಸ್ತಾನ್ ಪ್ರತ್ಯೇಕವಾದಿ ಹೋರಾಟಗಾರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣದ ಸಂಬಂಧ ಕೆನಡಾದ ಪೊಲೀಸರು ಮತ್ತೊಬ್ಬ ಭಾರತೀಯ ಪ್ರಜೆಯನ್ನು ಬಂಧಿಸಿದ್ದಾರೆ. ಈ ಮೂಲಕ ಬಂಧಿತರಾದ ಭಾರತೀಯ ಪ್ರಜೆಗಳ ಸಂಖ್ಯೆ 4ಕ್ಕೆ ಏರಿದೆ.
ಸರ್ರೆ ಬ್ರಾಂಪ್ಟನ್ನ ನಿವಾಸಿ ಅಮನ್ದೀಪ್ ಸಿಂಗ್ ಬಂಧಿತ. ಕೊಲೆ ನಡೆಸಲು ಸಂಚು ರೂಪಿಸಿದ ಆರೋಪ ಈತನ ಮೇಲಿದೆ. ಜೂನ್ 18, 2023ರಂದು ಸರ್ರೆಯ ಗುರುನಾನಕ್ ಸಿಖ್ ಗುರುದ್ವಾರ ಸಮೀಪ, 45 ವರ್ಷ ವಯಸ್ಸಿನ ನಿಜ್ಜರ್ ಹತ್ಯೆಯಾಗಿತ್ತು.
ನಿಜ್ಜರ್ ಕೊಲೆ ಪ್ರಕರಣದ ಸಂಬಂಧ ಅಮನ್ದೀಪ್ ಸಿಂಗ್ ಎಂಬುವವರನ್ನು ಮೇ 11ರಂದು ಬಂಧಿಸಲಾಗಿದೆ. ಸದ್ಯ ಪೊಲೀಸರ ವಶದಲ್ಲಿ ಆರೋಪಿ ಇದ್ದಾರೆ ಎಂದು ತನಿಖಾ ತಂಡ ಹೇಳಿಕೆ ಮೂಲಕ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.