ADVERTISEMENT

ಫ್ರಾನ್ಸ್‌–ಉಕ್ರೇನ್‌ ನಡುವೆ ಭದ್ರತಾ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2024, 15:18 IST
Last Updated 15 ಫೆಬ್ರುವರಿ 2024, 15:18 IST
<div class="paragraphs"><p>ವೊಲೊಡಿಮಿರ್‌ ಝೆಲೆನ್‌ಸ್ಕಿ</p></div>

ವೊಲೊಡಿಮಿರ್‌ ಝೆಲೆನ್‌ಸ್ಕಿ

   

ಪ್ಯಾರಿಸ್‌: ಫ್ರಾನ್ಸ್‌ ಮತ್ತು ಉಕ್ರೇನ್‌ ದೇಶಗಳು ಗುರುವಾರ ದ್ವಿಪಕ್ಷೀಯ ಭದ್ರತಾ ಒಪ್ಪಂದ ಮಾಡಿಕೊಂಡಿವೆ. ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರನ್‌ ಮತ್ತು ವೊಲೊಡಿಮಿರ್‌ ಝೆಲೆನ್‌ಸ್ಕಿ ಅವರು ಈ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ.

ಫ್ರಾನ್ಸ್‌ ಎಲಿಸೀ ಅರಮನೆಯಲ್ಲಿ ನಡೆದ ಈ ಒಪ್ಪಂದದ ಕುರಿತ ವಿವರಗಳನ್ನು ಎರಡೂ ರಾಷ್ಟ್ರಗಳು ಬಿಡುಗಡೆ ಮಾಡಿಲ್ಲ. 

ADVERTISEMENT

ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣ ಮಾಡಿದ ಬಳಿಕ ಝೆಲೆನ್‌ಸ್ಕಿ ಅವರು ಪ್ಯಾರಿಸ್‌ಗೆ ನೀಡಿದ ಮೂರನೇ ಭೇಟಿ ವೇಳೆ ಈ ಒಪ್ಪಂದ ನಡೆದಿದೆ. ಇದಕ್ಕೂ ಮುನ್ನ ಅವರು 2023ರ ಫೆಬ್ರುವರಿ ಮತ್ತು ಮೇ ತಿಂಗಳಲ್ಲಿ ಪ್ಯಾರಿಸ್‌ಗೆ ಭೇಟಿ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.