ಪ್ಯಾರಿಸ್: ಭಾರತದಲ್ಲಿ ಕೋವಿಡ್ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಹಲವು ದೇಶಗಳು ಭಾರತದ ನೆರವಿಗೆ ಧಾವಿಸುತ್ತಿವೆ. ಇದೀಗ ಫ್ರಾನ್ಸ್ ವೈದ್ಯಕೀಯ ನೆರವು ನೀಡುವುದಾಗಿ ಮಂಗಳವಾರ ತಿಳಿಸಿದೆ.
ಫ್ರಾನ್ಸ್ ಅಧ್ಯಕ್ಷ ಎಮ್ಯಾನ್ಯುಯೆಲ್ ಮ್ಯಾಕ್ರನ್ಭಾರತಕ್ಕೆ ಅಗತ್ಯ ವೈದ್ಯಕೀಯ ನೆರವು ನೀಡುವುದಾಗಿ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಸಾಂಕ್ರಾಮಿಕ ಬಿಕ್ಕಟ್ಟನ್ನು ನಿವಾರಿಸಲು ಭಾರತಕ್ಕೆ ಅಗತ್ಯ ನೆರವು ನೀಡಲಾಗುವುದು ಎಂದು ಎಮ್ಯಾನ್ಯುಯೆಲ್ ಮ್ಯಾಕ್ರನ್ ಹೇಳಿದ್ದಾರೆ.
8 ಆಮ್ಲಜನಕ ಉತ್ಪಾದನೆ ಮಾಡುವ ಪರಿಕರಗಳು, ಆಕ್ಸಿಜನ್ ಹಾಗೂ ದ್ರವೀಕೃತ ಆಮ್ಲಜನಕ ಇರುವ ಕಂಟೇನರ್‌ಗಳು, 200 ಎಲೆಕ್ಟ್ರಿಕ್ ಸಿರೆಂಜ್ ಪಂಪ್, ವೆಂಟಿಲೇಟರ್, ಕೃತಕ ಉಸಿರಾಟ ಪರಿಕರಗಳು ಸೇರಿದಂತೆ ಲಸಿಕೆ ಹಾಗೂ ಔಷಧಿ ಸಾಮಗ್ರಿಗಳನ್ನು ನೀಡುವುದಾಗಿ ಫ್ರಾನ್ಸ್ ಹೇಳಿದೆ.
ವೈದ್ಯಕೀಯ ಸಾಮಗ್ರಿಗಳನ್ನು ವಿಮಾನ ಹಾಗೂ ನೌಕಯಾನದ ಮೂಲಕ ಭಾರತಕ್ಕೆ ಕಳುಹಿಸಿಕೊಡಲಾಗುವುದು ಎಂದು ಫ್ರಾನ್ಸ್‌ನ ವಿದೇಶಾಂಗ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
8 ಆಮ್ಲಜನಕ ಉತ್ಪಾದಕ ಘಟಕಗಳನ್ನು ಆಸ್ಪತ್ರೆಗಳಲ್ಲಿ ಸ್ಥಾಪಿಸಿ ಆಕ್ಸಿಜನ್ ಉತ್ಪಾದನೆ ಮಾಡಬಹುದಾಗಿದೆ. ಒಂದು ಘಟಕದಿಂದ 250 ರೋಗಿಗಳಿಗೆ ಆಕ್ಸಿಜನ್ ನೀಡಬಹುದಾಗಿದೆ.
ಈಗಾಗಲೇ ಭಾರತಕ್ಕೆ ಅಮೆರಿಕ ಯುಎಇ, ಡೆನ್ಮಾರ್ಕ್, ಸಿಂಗಪುರ್, ಇಸ್ರೆಲ್ ಸೇರಿದಂತೆ ಹಲವು ಯುರೋಪ್ ದೇಶಗಳು ವೈದ್ಯಕೀಯ ನೆರವನ್ನು ಘೋಷಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.