ಪ್ಯಾರಿಸ್: ಗರ್ಭಪಾತಕ್ಕೆ ಅನುಮತಿ ನೀಡುವ ಮಸೂದೆಗೆ ಫ್ರಾನ್ಸ್‌ನ ಸೆನೆಟ್ ಸದಸ್ಯರು ಬುಧವಾರ ಬೆಂಬಲ ಸೂಚಿಸಿದ್ದು, ಈ ಮೂಲಕ ಸರ್ಕಾರದ ನಿರ್ಧಾರಕ್ಕೆ ಮತ್ತಷ್ಟು ಬಲ ಬಂದಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
‘ಗರ್ಭಪಾತ ಮಾಡಿಸಿಕೊಳ್ಳುವುದು ಮಹಿಳೆಯ ಸ್ವಾತಂತ್ರ್ಯದ ಭಾಗವಾಗಿದೆ’ ಎಂದು ಸೆನೆಟ್ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಂವಿಧಾನ ತಿದ್ದುಪಡಿ ಮಾಡಲು ವಿಶೇಷ ಸಭೆಯಲ್ಲಿ ಐದನೇ ಮೂರು ಭಾಗದಷ್ಟು ಸದಸ್ಯರ ಒಪ್ಪಿಗೆ ಅಗತ್ಯವಾಗಿದ್ದು, ಸೋಮವಾರ ಈ ಪ್ರಕ್ರಿಯೆ ನಡೆಯಲಿದೆ. ಈಗಾಗಲೇ ಎರಡೂ ಸದನಗಳಲ್ಲಿ ಮಸೂದೆಗೆ ವ್ಯಾಪಕ ಬೆಂಬಲ ದೊರಕಿದೆ.
ಗರ್ಭಪಾತದ ಹಕ್ಕನ್ನು ಖಾತ್ರಿಪಡಿಸಲು ಮತ್ತು ಭವಿಷ್ಯದ ಸರ್ಕಾರಗಳು ಇದನ್ನು ರದ್ದುಪಡಿಸದಿರಲು ಹಲವಾರು ಪ್ರಸ್ತಾವಿತ ಮಸೂದೆಗಳನ್ನು ಮಂಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.