ಪ್ಯಾರಿಸ್: ‘ಯೆಮನ್ ಕಡೆಯಿಂದ ಬಂದ ಡ್ರೋನ್‌ಗಳು ಕೆಂಪು ಸಮುದ್ರದಲ್ಲಿ ನಮ್ಮ ಯುದ್ಧನೌಕೆಯನ್ನು ಗುರಿಯಾಗಿಸಿಕೊಂಡು ದಾಳಿಗೆ ಮುಂದಾಗಿದ್ದವು, ಸದ್ಯ ಅವುಗಳನ್ನು ಹೊಡೆದುರುಳಿಸಲಾಗಿದೆ’ ಎಂದು ಫ್ರಾನ್ಸ್ ಭಾನುವಾರ ಹೇಳಿದೆ.
ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಫ್ರಾನ್ಸ್ ಸೇನೆ, ತನ್ನ ಯುದ್ಧನೌಕೆ ಗುರಿಯಾಗಿಸಿ ಡ್ರೋನ್ ದಾಳಿ ನಡೆಸಿದ್ದು ಯಾರು ಎಂಬ ಬಗ್ಗೆ ಏನನ್ನೂ ಹೇಳಿಲ್ಲ. ‘ಡ್ರೋನ್‌ಗಳು ಒಂದಾದ ಮೇಲೆ ಒಂದರಂತೆ ಯುದ್ಧನೌಕೆಯತ್ತ ಬಂದವು. ಎರಡನ್ನೂ ಹೊಡೆದುರುಳಿಸಲಾಯಿತು’ ಎಂದು ತಿಳಿಸಿದೆ.
ಡ್ರೋನ್ ಹೊಡೆದುರುಳಿಸಲು ಯಾವ ಶಸ್ತ್ರಾಸ್ತ್ರ ಬಳಸಲಾಯಿತು ಎಂದು ಅದು ಮಾಹಿತಿ ನೀಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.