ADVERTISEMENT

ಕಟ್ಟಡ ಹತ್ತಿ ವಿಡಿಯೊ ಮಾಡುತ್ತಿದ್ದ ವ್ಯಕ್ತಿ 68ನೇ ಮಹಡಿಯಿಂದ ಬಿದ್ದು ಸಾವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಜುಲೈ 2023, 10:42 IST
Last Updated 31 ಜುಲೈ 2023, 10:42 IST
ರೆಮಿ ಲುಸಿಡಿ (ಟ್ವಿಟರ್‌ ಚಿತ್ರ–@NoNext_Question)
ರೆಮಿ ಲುಸಿಡಿ (ಟ್ವಿಟರ್‌ ಚಿತ್ರ–@NoNext_Question)   

ಹಾಂಗ್‌ಕಾಂಗ್‌ : ಗಗನಚುಂಬಿ ಕಟ್ಟಡಗಳ ತುತ್ತತುದಿಗೆ ತಲುಪಿ ನೋಡುಗರ ಮೈ ಜುಮ್ಮೆನಿಸುವಂತೆ ಸ್ಟಂಟ್‌, ರೀಲ್ಸ್‌ (ವಿಡಿಯೊ)  ಮಾಡುತ್ತಿದ್ದ ರೆಮಿ ಲುಸಿಡಿ (30) ಹಾಂಗ್‌ಕಾಂಗ್‌ನ ವಸತಿ ಕಟ್ಟಡವೊಂದರ 68ನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾರೆ.

ಲುಸಿಡಿ ಅವರು ಫ್ರೆಂಚ್‌ ಡೇರ್ ಡೆವಿಲ್‌ ಎಂದೇ ಖ್ಯಾತಿ ಪಡೆದಿದ್ದರು. ಇವರು ಟ್ರೆಗುಂಟರ್ ಟವರ್ ಸಂಕೀರ್ಣ ಹತ್ತಿದ್ದ ವೇಳೆ ಬಿದ್ದಿದ್ದಾರೆ. ಅವರು ಕಾಲು ಜಾರಿ ಆಯತಪ್ಪಿ ಕೆಳಕ್ಕೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಮಾಧ್ಯಮಗಳ ವರದಿ ಹೇಳಿದೆ. 

ಸಂಜೆ 6 ಗಂಟೆ ವೇಳೆಗೆ ಲುಸಿಡಿ ಅವರು 40ನೇ ಮಹಡಿಯಲ್ಲಿನ ಸ್ನೇಹಿತನನ್ನು ಭೇಟಿಯಾಗಲು ಬಂದಿರುವುದಾಗಿ ಸೆಕ್ಯುರಿಟಿ ಬಳಿ ಹೇಳಿದ್ದರು, ಸೆಕ್ಯುರಿಟಿ ತಡೆಯಲು ಯತ್ನಿಸಿದರೂ ಅಷ್ಟರಲ್ಲಿ ಅವರು ಕಟ್ಟಡದ ಒಳಗೆ ಪ್ರವೇಶಿಸಿದ್ದರು. 49ನೇ ಮಹಡಿಗೆ ಲುಸಿಡಿ ಬಂದು ನಂತರ ಮೆಟ್ಟಿಲುಗಳ ಮೂಲಕ ಕೊನೆಯ ಮಹಡಿಗೆ ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಹಾಂಗ್‌ಕಾಂಗ್‌ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಘಟನಾ ಸ್ಥಳದಲ್ಲಿ ಪೊಲೀಸರಿಗೆ ಲುಸಿಡಿ ಅವರ ಕ್ಯಾಮೆರಾ ದೊರಕಿದ್ದು, ಅದರಲ್ಲಿ ಎತ್ತರಕ್ಕೆ ಏರಿ ಅವರು ಸಾಹಸಗಳನ್ನು ಮಾಡಿದ ವಿಡಿಯೊಗಳು ದಾಖಲಾಗಿದೆ. ಲುಸಿಡಿ ಸಾವಿನ ಬಗ್ಗೆ ಪೊಲೀಸರು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.