ಢಾಕಾ: ಬಾಂಗ್ಲಾದೇಶದ ಸಾವ್ರರ್ತಿಕ ಚುನಾವಣೆ ಬಹಿರಂಗ ಪ್ರಚಾರ ಶುಕ್ರವಾರ ಮುಕ್ತಾಯಗೊಂಡಿದ್ದು, ಭಾರೀ ಹಿಂಸಾಚಾರ, ಪ್ರತಿಪಕ್ಷ ಕಾರ್ಯಕರ್ತರ ಬಂಧನ ನಡೆದಿದೆ. ಈ ಬೆಳವಣಿಗೆ ಕುರಿತಂತೆ ಅಂತರರಾಷ್ಟ್ರೀಯ ಸಮುದಾಯ ತೀವ್ರ ಕಳವಳ ವ್ಯಕ್ತಪಡಿಸಿದೆ.
ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಕ್ಷ (ಬಿಎನ್‌ಪಿ) ಬೆಂಬಲಿಗರು ಆಡಳಿತರೂಢಾ ಅವಾಮಿ ಲೀಗ್‌ನ ಪಕ್ಷದ ಕಾರ್ಯಕರ್ತರೊಬ್ಬರನ್ನು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಪಕ್ಷದ 19 ಮಂದಿ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಬಿಎನ್‌ಪಿ ನಾಯಕರು ತಿಳಿಸಿದ್ದಾರೆ.
ಏಳು ವಾರಗಳ ಕಾಲ ದೇಶದಾದ್ಯಂತ ನಡೆದ ಬಹಿರಂಗ ಚುನಾವಣಾ ಪ್ರಚಾರ ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಮುಕ್ತಾಯಗೊಂಡಿತು. ಭಾನುವಾರ ಮತದಾನ ನಡೆಯಲಿದ್ದು, ಕೊನೆಹಂತದಲ್ಲಿ ಮತದಾರರ ಮನಗೆಲ್ಲಲು, ಅವಾಮಿಲೀಗ್‌ನ ಬೆಂಬಲಿಗರು ರಾಜಧಾನಿ ಢಾಕಾದಲ್ಲಿ ಬೃಹತ್ ರ‍್ಯಾಲಿ ನಡೆಸಿದರು. ದೇಶದ ಕೆಲವು ಕಡೆಗಳಲ್ಲಿ ಅವಾಮಿಲೀಗ್– ಬಿಎನ್‌ಪಿ ಪಕ್ಷದ ಕಾರ್ಯಕರ್ತರು ಮಾರಾಮಾರಿ ನಡೆಸಿದ ಪ್ರಕರಣಗಳು ವರದಿಯಾಗಿದೆ.
ಸಮೀಕ್ಷೆಗಳ ಪ್ರಕಾರ, ಶೇಕ್ ಹಸೀನಾ ಸತತ ನಾಲ್ಕನೇ ಅವಧಿಗೂ ಸುಲಭವಾಗಿ ಜಯಗಳಿಸಲಿದ್ದಾರೆ ಎಂದು ತಿಳಿದುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.