ADVERTISEMENT

ಅಮೆರಿಕದಲ್ಲಿ ಶೀತಗಾಳಿ : ಕೆಲವೆಡೆ ಆರು ದಿನಗಳಿಂದ ವಿದ್ಯುತ್‌ ಸೌಲಭ್ಯವಿಲ್ಲ!

ಏಜೆನ್ಸೀಸ್
Published 28 ಫೆಬ್ರುವರಿ 2023, 14:06 IST
Last Updated 28 ಫೆಬ್ರುವರಿ 2023, 14:06 IST
.
.   

ಓಕ್ಲಾಹೋಮಾ ಸಿಟಿ (ಅಮೆರಿಕ): ಇಲ್ಲಿನ ಈಶಾನ್ಯದ ಕೆಲವು ಭಾಗಗಳಲ್ಲಿ ಮಂಗಳವಾರ ದಟ್ಟ ಹಿಮ ಆವರಿಸಿ, ಬಿರುಗಾಳಿ ಬೀಸುತ್ತಿದೆ. ಪ್ರತಿಕೂಲ ಹವಾಮಾನದ ಪರಿಣಾಮ ಓಕ್ಲಾಹೋಮಾದಲ್ಲಿ ಕನಿಷ್ಠ ಒಬ್ಬರು ಮೃತಪಟ್ಟಿದ್ದಾರೆ. ಮಿಚಿಗನ್‌ ನಿವಾಸಿಗಳು ಕಳೆದ ಆರು ದಿನಗಳಿಂದ ವಿದ್ಯುತ್‌ ಸೌಲಭ್ಯ ಇಲ್ಲದೆ ಕತ್ತಲೆಯಲ್ಲಿ ಕಾಲ ಕಳೆಯುತ್ತಿದ್ದಾರೆ.

ಶೀತಗಾಳಿಯು ಬುಧವಾರದವರೆಗೆ ಮುಂದುವರಿಯಲಿದೆ ಎಂದು ಕ್ಯಾಲಿಫೋರ್ನಿಯಾದ ರಾಷ್ಟ್ರೀಯ ಹವಾಮಾನ ಸಂಸ್ಥೆ ತಿಳಿಸಿದೆ.

ಪ್ರಾಥಮಿಕ ವರದಿ ಪ್ರಕಾರ, ಬಿರುಗಾಳಿಯಿಂದ ಕೆಲವೆಡೆ ಮರಗಳು ಉರುಳಿವೆ, ಕಟ್ಟಡಗಳ ಹೆಂಚುಗಳು ಒಡೆದಿವೆ ಎಂದು ಹವಾಮಾನ ತಜ್ಞ ರಫಲ್‌ ಒಗೋರೆಕ್‌ ಅವರು ತಿಳಿಸಿದ್ದಾರೆ.

ADVERTISEMENT

ಓಕ್ಲಾಹೋಮಾದಲ್ಲಿ ಮೂವರು ಗಾಯಗೊಂಡಿದ್ದಾರೆ. 20 ಮನೆಗಳಿಗೆ ಹಾನಿಯಾಗಿದೆ, ನಾಲ್ಕು ಮನೆಗಳು ಕುಸಿದುಬಿದ್ದಿವೆ. ಬಿರುಗಾಳಿ ಪರಿಣಾಮ ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದು, ಸಂಚಾರ ಅಸ್ತವ್ಯಸ್ತಗೊಂಡಿದೆ ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.