ADVERTISEMENT

ಜಾಗತಿಕ ಆರ್ಥಿಕ ಅಭಿವೃದ್ಧಿಗೆ ಭಾರತ–ಚೀನಾ ಶಕ್ತಿ: ತಜ್ಞರು

ಪಿಟಿಐ
Published 14 ನವೆಂಬರ್ 2024, 13:35 IST
Last Updated 14 ನವೆಂಬರ್ 2024, 13:35 IST
   

ಸಿಂಗಪುರ: ವಿಶ್ವದ ಭವಿಷ್ಯದ ಆರ್ಥಿಕತೆ ಅಭಿವೃದ್ಧಿಯಲ್ಲಿ ಭಾರತ ಹಾಗೂ ಚೀನಾ ಮಹತ್ವದ ಪಾತ್ರ ವಹಿಸಲಿವೆ. ಹೀಗಾಗಿ, ಸಿಂಗಪುರ ಹಾಗೂ ಆಗ್ನೇಯ ಏಷ್ಯಾ ರಾಷ್ಟ್ರಗಳು ಉಭಯ ದೇಶಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಬೇಕು ಎಂದು ಸಿಂಗಪುರ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವೆ ಖಾತೆ ಹಿರಿಯ ಸಚಿವೆ ಸಿಮ್‌ ಆನ್‌ ಅವರು ಗುರುವಾರ ಹೇಳಿದರು.

ಈಸ್ಟ್‌ ಏಷ್ಯನ್‌ ಇನ್ಸ್‌ಟಿಟ್ಯೂಟ್‌ ಹಾಗೂ ಇನ್ಸ್‌ಟಿಟ್ಯೂಟ್‌ ಆಫ್‌ ಸೌತ್‌ ಏಷ್ಯನ್‌ ಸ್ಟಡೀಸ್‌ ಜಂಟಿಯಾಗಿ ನ್ಯಾಷನಲ್‌ ಯುನಿವರ್ಸಿಟಿ ಆಫ್‌ ಸಿಂಗಪುರದಲ್ಲಿ ಆಯೋಜಿಸಿದ್ದ ‘ಚೀನಾ ಮತ್ತು ಭಾರತ: ಜಾಗತಿಕ ಆರ್ಥಿಕತೆ ರೂಪಿಸಲಿರುವ ಎರಡು ಬೃಹತ್‌ ರಾಷ್ಟ್ರಗಳು’ ಕುರಿತ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಐಎಸ್‌ಎಎಸ್‌ ನಿರ್ದೇಶಕ ಇಕ್ಬಾಲ್‌ ಸಿಂಗ್‌ ಸೆವಿಯಾ ಅವರು, ‘ಎಲ್ಲ ರಾಷ್ಟ್ರಗಳು ಹಸಿರು ಆರ್ಥಿಕತೆಗೆ ಪರಿವರ್ತನೆಗೊಳ್ಳುವಲ್ಲಿ ಹಾಗೂ ಭವಿಷ್ಯದ ಡಿಜಿಟಲೀಕರಣದಲ್ಲಿ ಭಾರತ ಹಾಗೂ ಚೀನಾ ಮಹತ್ವದ ಪಾತ್ರ ವಹಿಸಲಿವೆ’ ಎಂದು ಹೇಳಿದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.