ADVERTISEMENT

ಅಂತರರಾಷ್ಟ್ರೀಯ ತೆರಿಗೆ ಪದ್ಧತಿಗೆ ಜಿ7 ಮುಖಂಡರ ಬೆಂಬಲ: ಮಾಹಿತಿ ನೀಡಿದ ಮೆಲೋನಿ

ರಾಯಿಟರ್ಸ್
Published 15 ಜೂನ್ 2024, 13:41 IST
Last Updated 15 ಜೂನ್ 2024, 13:41 IST
<div class="paragraphs"><p>ಜಾರ್ಜಿಯಾ ಮೆಲೋನಿ</p></div>

ಜಾರ್ಜಿಯಾ ಮೆಲೋನಿ

   

ರಾಯಿಟರ್ಸ್ ಚಿತ್ರ

ಬೊರ್ಗೊ ಎಗ್ನಾಸಿಯಾ: ‘ಜಗತ್ತಿನ ಏಳು ಪ್ರಮುಖ ರಾಷ್ಟ್ರಗಳ ಜಿ7 ಶೃಂಗಸಭೆಯಲ್ಲಿ ಅಂತರರಾಷ್ಟ್ರೀಯ ತೆರಿಗೆ ಪದ್ಧತಿ ಜಾರಿ ಕುರಿತು ರಾಜಕೀಯ ಬೆಂಬಲ ಸಿಕ್ಕಿದೆ’ ಎಂದು ಆತಿಥೇಯ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಹೇಳಿದ್ದಾರೆ.

ADVERTISEMENT

ಶೃಂಗಸಭೆ ಕೊನೆಗೊಂಡ ನಂತರ ಮಾಹಿತಿ ನೀಡಿದ ಮೆಲೋನಿ, ‘ಜಾಗತಿಕ ಕನಿಷ್ಠ ತೆರಿಗೆ ಆಧಾರಿತ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವ ಕುರಿತು ಒಮ್ಮತ ವ್ಯಕ್ತವಾಯಿತು’ ಎಂದಿದ್ದಾರೆ.

‘ಜಾಗತಿಕ ಕನಿಷ್ಠ ತೆರಿಗೆ ಪದ್ಧತಿಯು ಬಹುಪಕ್ಷೀಯ ಸಮಾವೇಶದಲ್ಲಿ ಸಹಿಗೆ ಸಿದ್ಧವಾಗಿದ್ದು, ತಾಂತ್ರಿಕ ಹಂತದಲ್ಲಿದೆ. ಇದಕ್ಕೆ ತಮ್ಮ ನೆಲದ ರಾಜಕೀಯ ಇಚ್ಛೆಯನ್ನು ವ್ಯಕ್ತಪಡಿಸುವ ಹೊಣೆ ಆಯಾ ರಾಷ್ಟ್ರಗಳದ್ದಾಗಿದೆ. ಈ ತೆರಿಗೆ ಪದ್ಧತಿಗೆ ಇಟಲಿ ಬೆಂಬಲ ವ್ಯಕ್ತಪಡಿಸಿದ್ದು, ಇತರ ರಾಷ್ಟ್ರಗಳೂ ಶೀಘ್ರದಲ್ಲಿ ಒಪ್ಪಿಗೆ ಸೂಚಿಸುವ ವಿಶ್ವಾಸವಿದೆ’ ಎಂದು ಮೆಲೋನಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.