ADVERTISEMENT

G7 summit: ಸಭೆಗೂ ಎರಡು ದಿನ ಮೊದಲು ಇಟಲಿ ಸಂಸತ್ತಿನಲ್ಲಿ ಸಂಸದರ ಹೊಡೆದಾಟ

ಪಿಟಿಐ
Published 14 ಜೂನ್ 2024, 2:49 IST
Last Updated 14 ಜೂನ್ 2024, 2:49 IST
<div class="paragraphs"><p> ಇಟಲಿ ಸಂಸತ್ತಿನಲ್ಲಿ</p></div>

ಇಟಲಿ ಸಂಸತ್ತಿನಲ್ಲಿ

   

ಅಪುಲಿಯಾ: ಇಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಗೂ ಎರಡು ದಿನಗಳ ಮೊದಲು ಇಟಲಿ ಸಂಸತ್ತಿನಲ್ಲಿ ಪ್ರಾದೇಶಿಕ ಸ್ವಾಯತ್ತ ಅಧಿಕಾರದ ವಿಷಯವಾಗಿ ಸಂಸದರು ಪರಸ್ಪರ ಹೊಡೆದಾಡಿಕೊಂಡಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. 

ಪ್ರಾದೇಶಿಕ ಸ್ವಾಯತ್ತ ಅಧಿಕಾರಗಳನ್ನು ವಿಸ್ತರಿಸುವ ಉದ್ದೇಶದ ವಿವಾದಾತ್ಮಕ ಕಾನೂನಿನ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ಗದ್ದಲ ಉಂಟಾಯಿತು. ಈ ವೇಳೆ ವಿರೋಧ ಪಕ್ಷದ ಸಂಸದರೊಬ್ಬರು ಇಟಲಿ ಧ್ವಜವನ್ನು ಹಿಡಿದು ಕೊರಳಿಗೆ ಸುತ್ತಿಕೊಳ್ಳುತ್ತಿರುವಾಗ ಗಲಾಟೆ ನಡೆಯಿತು. ಈ ವೇಳೆ ಆಡಳಿತ ಮತ್ತು ವಿರೋಧ ಪಕ್ಷಗಳ ಸಂಸದರು ಪರಸ್ಪರ ಕೈ ಕೈ ಮಿಲಾಯಿಸಿದರು. 

ADVERTISEMENT

ತಕ್ಷಣವೇ ಗಾರ್ಡ್‌ಗಳು ಪರಿಸ್ಥಿತಿಯನ್ನು ನಿಭಾಯಿಸಿದರು. ಈ ವೇಳೆ ಸಂಸದರೊಬ್ಬರು ಗಾಯಗೊಂಡರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಇಟಲಿ ಮಾಧ್ಯಮಗಳು ವರದಿ ಮಾಡಿವೆ. 

ಜಿ7 ಶೃಂಗಸಭೆ ನಡೆಯುವ ಎರಡು ದಿನಗಳ ಮುನ್ನ ಈ ಘಟನೆ ನಡೆದಿದೆ. 

ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಆಹ್ವಾನದ ಮೇರೆಗೆ ಜೂನ್ 14 ರಂದು ಜಿ 7 ಶೃಂಗಸಭೆಯಲ್ಲಿ ಭಾಗವಹಿಸಲು ಇಟಲಿಯ ಅಪುಲಿಯಾ ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ತೆರಳಿದ್ದಾರೆ. 

ಅಭಿವೃದ್ಧಿಯಲ್ಲಿ ಹಿಂದುಳಿದ ದೇಶಗಳಿಗೆ ಸಂಬಂಧಿಸಿದ ಪ್ರಮುಖ ವಿಷಯಗಳನ್ನು ಈ ಅಧಿವೇಶನದಲ್ಲಿ ಚರ್ಚಿಸಲಾಗುವುದು ಎಂದು ಮೋದಿ ಹೇಳಿದ್ದಾರೆ.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.