ADVERTISEMENT

ಹೈಟಿ: ಗ್ಯಾಂಗ್ ನಡೆಸಿದ ಗುಂಡಿನ ದಾಳಿಗೆ 20 ಜನ ಬಲಿ

ಪುಟ್ಟ ರಾಷ್ಟ್ರ ಹೈಟಿಯಲ್ಲಿ ರಾಜಕೀಯ ಅಸ್ಥಿರತೆಯಿಂದ ಗ್ಯಾಂಗ್‌ವಾರ್‌ಗಳು ನಡೆಯುತ್ತಿವೆ. 2024ರ ಮೊದಲಾರ್ದದಲ್ಲಿಯೇ ಗ್ಯಾಂಗ್ ವಾರ್‌ನಿಂದ 3624 ಜನ ಮೃತಪಟ್ಟಿದ್ದಾರೆ.

ಪಿಟಿಐ
Published 4 ಅಕ್ಟೋಬರ್ 2024, 3:23 IST
Last Updated 4 ಅಕ್ಟೋಬರ್ 2024, 3:23 IST
<div class="paragraphs"><p>ಹೈಟಿ</p></div>

ಹೈಟಿ

   

ಪೋರ್ಟ್ ಆಫ್ ಪ್ರಿನ್ಸ್: ಕೆರೇಬಿಯನ್ ರಾಷ್ಟ್ರ ಹೈಟಿಯಲ್ಲಿ ಗ್ಯಾಂಗ್ ಒಂದು ನಡೆಸಿದ ಗುಂಡಿನ ದಾಳಿಗೆ 20 ಜನ ಬಲಿಯಾಗಿದ್ದಾರೆ.

ಗುರುವಾರ ಮುಂಜಾನೆ ಕಡಲ ತೀರದ ನಗರವಾದ ಪಾಂಟ್-ಸೋಂಡೆ ಎಂಬಲ್ಲಿಗೆ ನುಗ್ಗಿದ Gran Grif ಎಂಬ ಸಂಘಟನೆಯ ದುಷ್ಕರ್ಮಿಗಳು ಮನಸೋಇಚ್ಚೆ ಗುಂಡಿನ ದಾಳಿ ನಡೆಸಿದ್ದಾರೆ. ಮನೆಗಳಿಗೆ, ವಾಹನಗಳಿಗೆ ಬೆಂಕಿ ಇಟ್ಟಿದ್ದಾರೆ.

ADVERTISEMENT

ಈ ಘಟನೆಯಲ್ಲಿ 70 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಾಣಾಪಾಯದಿಂದ ತಪ್ಪಿಸಿಕೊಳ್ಳಲು ಜನ ದಿಕ್ಕಾಪಾಲಾಗಿ ಓಡಿದ್ದಾರೆ.

ಪುಟ್ಟ ರಾಷ್ಟ್ರ ಹೈಟಿಯಲ್ಲಿ ರಾಜಕೀಯ ಅಸ್ಥಿರತೆಯಿಂದ ಗ್ಯಾಂಗ್‌ವಾರ್‌ಗಳು ನಡೆಯುತ್ತಿವೆ. 2024ರ ಮೊದಲಾರ್ದದಲ್ಲಿಯೇ ಗ್ಯಾಂಗ್ ವಾರ್‌ನಿಂದ 3624 ಜನ ಮೃತಪಟ್ಟಿದ್ದಾರೆ.

ಇದರಿಂದ ಹೈಟಿಯಲ್ಲಿ 7 ಲಕ್ಷ ಜನ ತೀವ್ರ ತೊದರೆಗೆ ಸಿಲುಕಿದ್ದು ಒಂದು ಹೊತ್ತಿನ ಊಟಕ್ಕೂ ಪರಿತಪಿಸುತ್ತಿದ್ದಾರೆ. ಹೈಟಿಯಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಿ ಪರಿಸ್ಥಿತಿ ನಿಯಂತ್ರಿಸುವ ವಿಶ್ವಸಂಸ್ಥೆಯ ಯೋಜನೆಯೂ ಕೈಗೂಡಿಲ್ಲ ಎಂದು ಆರೋಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.