ADVERTISEMENT

‘ಸಲಿಂಗಿಗಳ ಹೆಮ್ಮೆಯ ನಡಿಗೆ’ : ನಾಲ್ಕು ಲಕ್ಷಕ್ಕೂ ಅಧಿಕ ಜನರು ಭಾಗಿ

ಏಜೆನ್ಸೀಸ್
Published 7 ಜುಲೈ 2019, 20:00 IST
Last Updated 7 ಜುಲೈ 2019, 20:00 IST
ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿ ನಡೆದ ’ಸಲಿಂಗಿಗಳ ಹೆಮ್ಮೆಯ ನಡಿಗೆ‘ಯಲ್ಲಿ ಭಾರಿ ಸಂಖ್ಯೆಯಲ್ಲಿ ಎಲ್‌ಜಿಬಿಟಿ ಸಮುದಾಯದವರು ಪಾಲ್ಗೊಂಡಿದ್ದರು  –ಪಿಟಿಐ ಚಿತ್ರ
ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿ ನಡೆದ ’ಸಲಿಂಗಿಗಳ ಹೆಮ್ಮೆಯ ನಡಿಗೆ‘ಯಲ್ಲಿ ಭಾರಿ ಸಂಖ್ಯೆಯಲ್ಲಿ ಎಲ್‌ಜಿಬಿಟಿ ಸಮುದಾಯದವರು ಪಾಲ್ಗೊಂಡಿದ್ದರು  –ಪಿಟಿಐ ಚಿತ್ರ   

ಮ್ಯಾಡ್ರಿಡ್‌, (ಸ್ಪೇನ್‌): ನಗರದ ಪ್ರಮುಖ ಬೀದಿಗಳಲ್ಲಿ ಶನಿವಾರ ‘ಸಲಿಂಗಿಗಳ ಹೆಮ್ಮೆಯ ನಡಿಗೆ’ ನಡೆಯಿತು. ನಾಲ್ಕು ಲಕ್ಷಕ್ಕೂ ಅಧಿಕ ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತೃತೀಯ ಲಿಂಗಿಗಳು, ಸಲಿಂಗಕಾಮಿಗಳ (ಎಲ್‌ಜಿಬಿಟಿ) ಹಕ್ಕುಗಳಿಗಾಗಿ ಹೋರಾಡಿದವರಿಗೆ ಈ ನಡಿಗೆಯನ್ನು ಸಮರ್ಪಿಸಲಾಗಿತ್ತು. ಅದರಲ್ಲೂ, ಯುರೋಪ್‌ನಲ್ಲಿ ಬಲಪಂಥೀಯ ವಿಚಾರಧಾರೆ ಮತ್ತೆ ಮುನ್ನೆಲೆಗೆ ಬರುತ್ತಿದ್ದು, ಸಲಿಂಗ ಕಾಮಕ್ಕೆ ವಿರೋಧ ವ್ಯಕ್ತವಾಗುತ್ತಿರುವ ಸಂದರ್ಭದಲ್ಲಿ ಈ ಕಾರ್ಯಕ್ರಮ ನಡೆಯುತ್ತಿರುವುದು ಗಮನಾರ್ಹ.

’ಇತಿಹಾಸ, ಹೋರಾಟ ಹಾಗೂ ಸ್ಮರಣೆ‘ ಎಂಬುದು ಈ ವರ್ಷದ ಧ್ಯೇಯವಾಕ್ಯವಾಗಿದ್ದು, ಸಲಿಂಗ ಕಾಮಿಗಳ ಹಕ್ಕುಗಳಿಗಾಗಿ 1969ರಲ್ಲಿ ನ್ಯೂಯಾರ್ಕ್‌ನಲ್ಲಿ ನಡೆದ ಸಂಘರ್ಷವನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.

ADVERTISEMENT

ಸ್ವತಃ ಸಲಿಂಗ ಕಾಮಿಯೂ ಆಗಿರುವ ಸ್ಪೇನ್‌ನ ಆಂತರಿಕ ವ್ಯವಹಾರಗಳ ಸಚಿವ ಫರ್ನ್ಯಾಂಡೊ ಗ್ರ್ಯಾಂಡೆ ಮರ್ಲಾಸ್ಕ, ‘ನಾವು ಎಲ್‌ಜಿಬಿಟಿ ಸಮುದಾಯದವರ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದೇವೆ ಎಂದರೆ ಅದು ಮಾನವ ಹಕ್ಕುಗಳಿಗಾಗಿನ ಹೋರಾಟವೇ ಆಗಿದೆ. ನಮ್ಮನ್ನು ವಿರೋಧಿಸುವವರು ಈ ಅಂಶವನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ‘ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.