ADVERTISEMENT

Israel–Hamas war | ಗಾಜಾ ಬಿಕ್ಕಟ್ಟಿಗೆ ಸೂಕ್ತ ಪರಿಹಾರದ ಅಗತ್ಯವಿದೆ: ಜೈಶಂಕರ್

ಪಿಟಿಐ
Published 20 ಜನವರಿ 2024, 3:27 IST
Last Updated 20 ಜನವರಿ 2024, 3:27 IST
<div class="paragraphs"><p>ಅಲಿಪ್ತ ಚಳವಳಿ ಶೃಂಗಸಭೆಯಲ್ಲಿ ಕೇಂದ್ರ ಸಚಿವ ಜೈಶಂಕರ್‌</p></div>

ಅಲಿಪ್ತ ಚಳವಳಿ ಶೃಂಗಸಭೆಯಲ್ಲಿ ಕೇಂದ್ರ ಸಚಿವ ಜೈಶಂಕರ್‌

   

ಕಂಪಾಲ(ಉಗಾಂಡ): ಮಾನವೀಯ ಬಿಕ್ಕಟ್ಟಿನಿಂದ ಜರ್ಜರಿತವಾಗಿರುವ ಗಾಜಾಕ್ಕೆ ಸೂಕ್ತ ಪರಿಹಾರ ಕ್ರಮವೊಂದರ ಅಗತ್ಯವಿದ್ದು, ಇದು ಯುದ್ಧ ಸಂತ್ರಸ್ತರಿಗೆ ತಕ್ಷಣದ ಪರಿಹಾರ ನೀಡುವಂತಿರಬೇಕು ಎಂದು ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದಾರೆ.

ಉಗಾಂಡದ ಕಂಪಾಲದಲ್ಲಿ ನಡೆದ ಅಲಿಪ್ತ ಚಳವಳಿ ಶೃಂಗಸಭೆಯಲ್ಲಿ ಭಾಗವಹಿಸಿದ ಅವರು, ‘ಗಾಜಾ ಸಂಘರ್ಷದ ಭೀಕರತೆ ನಮಗೀಗ ಅರ್ಥವಾಗುತ್ತಿದೆ. ಇದಕ್ಕೆ ಸೂಕ್ತ ಪರಿಹಾರವೊಂದರ ಅಗತ್ಯವಿದೆ’ ಎಂದು ಹೇಳಿದರು.

ADVERTISEMENT

‘ಭಯೋತ್ಪಾದನೆ ಮತ್ತು ಒತ್ತೆಯಾಳುಗಳ ಮೂಲಕ ಬೆದರಿಕೆ ಒಡ್ಡುವ ಕ್ರಮಗಳು ಸರಿಯಲ್ಲ ಎಂಬುದನ್ನು ಮೊದಲು ನಾವು ಸ್ಪಷ್ಟಪಡಿಸಬೇಕು. ಅದರಂತೆಯೇ ಅಂತರರಾಷ್ಟ್ರೀಯ ಕಾನೂನುಗಳನ್ನು ಎಲ್ಲ ದೇಶಗಳು ಗೌರವಿಸಬೇಕಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.