ADVERTISEMENT

ಸಿಬ್ಬಂದಿಗೆ ಪಿಜ್ಜಾ ಪೂರೈಸಿದ ಬುಷ್

​ಪ್ರಜಾವಾಣಿ ವಾರ್ತೆ
Published 19 ಜನವರಿ 2019, 16:44 IST
Last Updated 19 ಜನವರಿ 2019, 16:44 IST
   

ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರ ಭಾಗಶಃ ಸ್ಥಗಿತಗೊಂಡಿದ್ದು, ನೌಕರರು ಸಂಬಳವಿಲ್ಲದೇ ಪರದಾಡುತ್ತಿದ್ದಾರೆ. ಮಾಜಿ ಅಧ್ಯಕ್ಷ ಜಾರ್ಜ್ ಬುಷ್ ಅವರ ಸಿಬ್ಬಂದಿಗೂ ಇದರ ಬಿಸಿ ತಾಗಿದೆ.

ಸ್ವತಃ ಬುಷ್ ಹಾಗೂ ಅವರ ಪತ್ನಿ ಲಾರಾ ಬುಷ್ ಅವರು ಒಂದಿಷ್ಟು ಪಿಜ್ಜಾ ಖರೀದಿಸಿ, ತಮ್ಮ ಸಿಬ್ಬಂದಿಗೆ ನೀಡಿದ್ದಾರೆ. ಈ ಚಿತ್ರವನ್ನು ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ತಮ್ಮ ಬಳಿ ಕೆಲಸ ಮಾಡುತ್ತಿರುವ ಸೀಕ್ರೆಟ್ ಸರ್ವೀಸ್ ಸಿಬ್ಬಂದಿ ಸೇರಿದಂತೆ ಸಾವಿರಾರು ಸರ್ಕಾರಿ ನೌಕರರಿಗೆ ಬುಷ್ ಧನ್ಯವಾದ ಹೇಳಿದ್ದಾರೆ. ಸಂಬಳವಿಲ್ಲದಿದ್ದರೂ ದೇಶಕ್ಕಾಗಿ ಕೆಲಸ ಮಾಡುತ್ತಿರುವ ಅವರನ್ನು ಅಭಿನಂದಿಸಿದ್ದಾರೆ.

ADVERTISEMENT

ಸರ್ಕಾರಿ ಆಡಳಿತ ಸ್ಥಗಿತಗೊಂಡು 27 ದಿನಗಳು ಕಳೆದಿದ್ದು, ಅಮೆರಿಕ ಇತಿಹಾಸದಲ್ಲೇ ಇದು ಅತ್ಯಧಿಕ ಅವಧಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.